Home ಟಾಪ್ ಸುದ್ದಿಗಳು ದಾವಣಗೆರೆ ಪ್ರಕ್ಷುಬ್ಧತೆಗೆ ಕಾರಣವಾಗಿರುವ ಸತೀಶ್ ಪೂಜಾರಿ ಮತ್ತು ಸಂಗಡಿಗರ ಬಂಧನ ಆಗ್ರಹಿಸಿ ಎಡಿಜಿಪಿ ಗೆ SDPI...

ದಾವಣಗೆರೆ ಪ್ರಕ್ಷುಬ್ಧತೆಗೆ ಕಾರಣವಾಗಿರುವ ಸತೀಶ್ ಪೂಜಾರಿ ಮತ್ತು ಸಂಗಡಿಗರ ಬಂಧನ ಆಗ್ರಹಿಸಿ ಎಡಿಜಿಪಿ ಗೆ SDPI ಮನವಿ

ದಾವಣಗೆರೆ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ನಾಯಕರು ಎಡಿಜಿಪಿ ಆರ್ ಹಿತೇಂದ್ರ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ರವರನ್ನು ಭೇಟಿ ಮಾಡಿ ದಾವಣಗೆರೆ ನಗರದಲ್ಲಿ ಆಶಾಂತಿ ಸೃಷ್ಟಿಸಿದವರನ್ನು ಶೀಘ್ರವಾಗಿ ಬಂಧಿಸಿ ಗಡಿಪಾರು ಮಾಡಬೇಕು, ಹಾಗೂ ಯಾವುದೇ ಅಮಾಯಕರನ್ನು ಬಂಧಿಸದೆ ಕೇವಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನಗರದಲ್ಲಿ ಶಾಂತಿ ಕಾಪಡಬೇಕು ಎಂದು ಮನವಿ ಸಲ್ಲಿಸಿದರು.

ದಿನಾಂಕ 15/09/2024 ಭಾನುವಾರ ರಂದು ಅಹ್ಮದ್ ನಗರದಲ್ಲಿ ಬಾವುಟ ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆಯನ್ನು ಪೊಲೀಸರು ದೂರು ದಾಖಲಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರೂ,ಆದರೆ ಮರುದಿನ ನಗರದ ಮಹಾನಗರ ಪಾಲಿಕೆ ಎದುರು ನಡೆದ ಪ್ರತಿಭಟನೆಯಲ್ಲಿ ಸತೀಶ್ ಪೂಜಾರಿ ಹಾಗೂ ಇತರರು ಒಂದು ಸಮುದಾಯಕ್ಕೆ ಟಾರ್ಗೆಟ್ ಮಾಡಿ ಏರಿಯಾಕ್ಕೆ ನುಗ್ಗುತ್ತೇವೆ. ಮತ್ತು ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ನಾಯಿಗಳು ಎಂದು ಹೇಳಿದ ವಿಡಿಯೋ ವೈರಲ್ ಆದ ನಂತರ ,ಮುಸ್ಲಿಂ ಮುಖಂಡರು,ಮಂಡಕ್ಕಿ ಭಟ್ಟಿಗಳ ಅಧ್ಯಕ್ಷರು ಓಟ್ಟುಗೂಡಿ ದಾವಣಗೆರೆ ನಗರದ ಅಜಾದ್ ನಗರ ಮತ್ತು ಪಿಜೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದಾಗ ಅಧಿಕಾರಿಗಳು ಕಾನೂನು ಕ್ರಮಕೈಗೂಳ್ಳುವ ಆಶ್ವಾಸನೆ ನೀಡಿರುತ್ತಾರೆ. ಆ ನಂತರ ಮರುದಿನ ಬೇತೂರು ರಸ್ತೆಯಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲೂ ಸತೀಶ್ ಪೂಜಾರಿ ಕಾಣಿಸಿಕೊಂಡಾಗ ,ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡಲು ಬಂದಿದ್ದಾನೆಂದು ತಿಳಿದು ಹಾಗೂ ಕೋಮು ಸಂಘರ್ಷವನ್ನು ಉಂಟು ಮಾಡುವ ಹೇಳಿಕೆ ನೀಡಿದ ಮೇಲೆ ಎಫ್.ಐ.ಆರ್ ಆದರೂ ಅವನನ್ನು ಬಂಧಿಸದೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಾಗೆಯೇ ತಡ ರಾತ್ರಿ ನಗರದ ಖಡಕ್ ಷಾವಲಿ ಮಕಾನ್ ಹತ್ತಿರ ಒಬ್ಬ ಯುವಕನನ್ನು ಗುಂಪೊಂದು ತಡೆದು ನಿಲ್ಲಿಸಿ ತಳಿಸಿದ ಘಟನೆ ಮತ್ತೊಂದಡೇ ಬಂಬೂ ಬಜಾರಿನ ಮಟ್ಟಿಕಲ್ ಹತ್ತಿರ ಮಸೀದಿಯ ಗುರುಗಳ ಮೇಲೆ ಮರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆಗಳು ಸಂಭವಿಸಿ ದೂರುಗಳು ದಾಖಲಾಗಿರುತ್ತವೆ. ಹಾಗೂ ಈ ವೇಳೆಯಲ್ಲಿ ನಗರದ ಕೆಲವೆಡೆ ಮುಸ್ಲಿಮರ ಅಂಗಡಿ ಮುಂಗಟ್ಟು ಮತ್ತು ಮನೆ ಹಾಗೂ ವಾಹನಗಳ ಮೇಲೆ ದಾಳಿ ಮಾಡಿ ಆಸ್ತಿಪಾಸ್ತಿಗಳ ನಷ್ಟ ಮಾಡಲಾಗಿದೆ.
ನಂತರ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದೆ. ಆದಕಾರಣ ತಾವುಗಳು ಈ ಕೂಡಲೇ ಕೋಮು ಸೌಹಾರ್ದ ಕೆಡಿಸುವಂತಹ ಸನ್ನಿವೇಶ ಸೃಷ್ಟಿಯಾಗಲು ಕಾರಣರಾದ, ಪ್ರಚೋದನಕಾರಿ ಹೇಳಿಕೆ ನೀಡಿರುವಂತಹ ಸತೀಶ್ ಪೂಜಾರಿ ಹಾಗೂ ದಾವಣಗೆರೆಯ ಶಾಂತಿಗೆ ಭಂಗ ತಂದತಹ ಪ್ರತಿಭಟನೆ ಗೆ ನೇತೃತ್ವ ವಹಿಸಿದ್ದ ಎಸ್ ಟಿ ವೀರೇಶ್, ರಾಜನಹಳ್ಳಿ ಶಿವಕುಮಾರ್, ಜೋಳ್ಳಿಗುರು, ವೀರೇಶ್ ಎಂ ಲೋಕಿಕೆರೆ ನಾಗರಾಜ್ ಮತ್ತು ಇತರರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ಯಾವುದೇ ಅಮಾಯಕರನ್ನು ಬಂಧಿಸದೆ ತಪ್ಪಿತಸ್ಥ ರ ವಿರುದ್ಧ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಅಮಾಯಕರನ್ನು ಬಂಧಿಸಿದ್ದಾರೆ ಆದರೆ ಅವರನ್ನು ಶೀಘ್ರವಾಗಿ ಬಿಡುಗಡೆಗೊಳಿಸಿ ನಗರದಲ್ಲಿ ಮತ್ತೊಮ್ಮೆ ಶಾಂತಿ ಸ್ಥಾಪಿಸಿ ಎಂದು ಎಸ್ ಡಿಪಿಐ ಮನವಿ ಮಾಡಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಯಹಿಯಾ, ಜಿಲ್ಲಾ ಉಪಾಧ್ಯಕ್ಷರಾದ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಜಬಿವುಲ್ಲಾ, ಮನ್ಸೂರ್ ಆಲಿ, ಹಾಗೂ 2ನೇ ವಾರ್ಡಿನ ಕಾರ್ಪೊರೇಟರ್ ದಾದಾಪೀರ್ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಏಜಾಜ್ ಅಹಮದ್, ಕಾರ್ಯದರ್ಶಿ ಇಸಾಕ್ ಅಹಮದ್, ಮತ್ತು ಹರಿಹರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಮಿಉಲ್ಲಾ ಮುಜಾವರ್, ಪದಾಧಿಕಾರಿಗಳಾದ ರಫೀಕ್, ಶಫಿ ಮತ್ತು ಇತರರು ಉಪಸ್ಥಿತರಿದ್ದರು.

Join Whatsapp
Exit mobile version