ರಾಸಲೀಲೆ CD | ಜಾರಕಿಹೊಳಿ ಶಾಸಕ ಸ್ಥಾನದಿಂದ ವಜಾಗೊಳಿಸಲು SDPI ಆಗ್ರಹ

Prasthutha: March 3, 2021

ಬೆಂಗಳೂರು: ರಾಜ್ಯ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವೀಡಿಯೋ ಸಿ.ಡಿ ಬಹಿರಂಗವಾದ ಕಾರಣ ಕೂಡಲೇ ರಾಜೀನಾಮೆ ನೀಡಿದರೆ ಸಾಲದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅವರ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಅಬ್ದುಲ್ ಜಲೀಲ್ ಕ್ರಷ್ಣಾಪುರ ಆಗ್ರಹಿಸಿದ್ದಾರೆ.

ಜನ ಪ್ರತಿನಿಧಿಗಳು ಶುದ್ದ ಚಾರಿತ್ರ್ಯ ಹೊಂದಿರಬೇಕು. ಹಿರಿಯ ರಾಜಕಾರಣಿ ಮತ್ತು ಸೆಕ್ಯುಲರ್ ಮತಗಳನ್ನು ಪಡೆದು ಪಕ್ಷ ವಿರೋಧಿ ಚಟುವಟಿಕೆ ಮಾಡಿ ಆಪರೇಶನ್ ಕಮಲದ ಮುಖ್ಯ ರೂವಾರಿಯಾಗಿದ್ದಾರೆ ರಮೇಶ್ ಜಾರಕಿಹೋಳಿ .ರಾಜ್ಯದಲ್ಲಿ ಬಿ.ಜೆ.ಪಿ ಸರಕಾರ ಬಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಲು ಪ್ರಮುಖ ಕಾರಣಕರ್ತರಾಗಿದ್ದರು. ಸೆಕ್ಸ್ ಹಗರಣದಲ್ಲಿ ಸಿಕ್ಕಿ ಬಿದ್ದ ಈ ನಾಯಕನನ್ನು ರಕ್ಷಿಸುವ ಕಾರ್ಯ ಬಿ.ಜೆ.ಪಿ ಮಾಡಬಾರದು. ಅವರು ರಾಜೀನಾಮೆ ನೀಡದಿದ್ದರೆ ಕೂಡಲೇ ವಜಾ ಮಾಡಬೇಕು.ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ  ತನಿಖೆ ಮಾಡಿಸಿ ಉಗ್ರ ಶಿಕ್ಷೆ ನೀಡಬೇಕು. ರಾಜಕಾರಣಿಗಳು ವಿಶೇಷವಾಗಿ ಬಿ.ಜೆ.ಪಿ ಮುಖಂಡರ ಸೆಕ್ಸ್ ಹಗರಣಗಳು ಆಗಾಗ ಬಹಿರಂಗವಾಗುತ್ತಿದೆ.ಇದರಿಂದ ಬಿ.ಜೆ.ಪಿ ಕೇವಲ ಭ್ರಷ್ಟಾಚಾರಿ ಮತ್ತು ಕೋಮುವಾದಿ ಪಕ್ಷ ಮಾತ್ರವಲ್ಲದೆ ಅಲ್ಲಿ ನೈತಿಕತೆಯೂ ದುರ್ಬಲವಾಗಿದೆ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!