ಸಮಾಜ ಸೇವಕ ಶುಹೈಬ್ ರಿಂದ ಮಾನವೀಯ ಕಾರ್ಯ: ಭಗಿನಿ ಸಮಾಜ ಮಕ್ಕಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ

Prasthutha|

ಮೈಸೂರಿನ ಸಮಾಜ ಸೇವಕ ಶುಹೈಬ್ ಮುಹಮ್ಮದ್ ಅವರು ಸ್ವಂತ ಖರ್ಚಿನಿಂದ ಮಂಗಳೂರಿನ ಭಗಿನಿ ಸಮಾಜದ ಮಕ್ಕಳಿಗೆ ಶಾಲಾ ಸಾಮಗ್ರಿ ಕಿಟ್ ವಿತರಿಸಿದ್ದಾರೆ. ಸಮಾಜದ ಎಲ್ಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಗುರುವಾರ ಭಗಿನಿ ಸಮಾಜಕ್ಕೆ ಭೇಟಿ ನೀಡಿದ ಎಡಿಜಿಪಿ ಭಾಸ್ಕರ್ ರಾವ್ ಅವರು ಶಾಲಾ ಸಾಮಾಗ್ರಿಗಳ ಕಿಟ್ನ್ನು ಮಕ್ಕಳಿಗೆ ಹಸ್ತಾಂತರಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಡಿಜಿಪಿ ಭಾಸ್ಕರ್ ರಾವ್, ಕೊರೋನಾ ಸಂಕಷ್ಟ ಕಾಲದಲ್ಲಿ ಮೈಸೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳಿ ಜನರಿಗೆ ತನ್ನಿಂದಾದ ಸಹಾಯವನ್ನು ಮಾಡುತ್ತಿರುವ ಶುಹೈಬ್ ಮುಹಮ್ಮದ್ ಅವರ ಕಾರ್ಯ ಶ್ಲಾಘನೀಯ ಎಂದರು.

- Advertisement -

ಶುಹೈಬ್ ಮುಹಮ್ಮದ್ ಮಾತನಾಡಿ, ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸಿ ನೆರವು ನೀಡುವ ಕಾರ್ಯ ಮಾಡುತ್ತಿದ್ದೇವೆ. ಇಂದು ಭಗಿನಿ ಸಮಾಜದಲ್ಲಿ ಮಕ್ಕಳಿಗೆ ಶಾಲಾ ಸಾಮಗ್ರಿ ವಿತರಣೆ, ದೈನಂದಿನ ಬಳಕೆಯ ವಸ್ತು ಹಾಗೂ ಮಧ್ಯಾಹ್ನದ ಊಟದ ಕಿಟ್ಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.

ಸದಸ್ಯರಾದ ಮನ್ಸೂರ್ ಮುಹಮ್ಮದ್ ಮೈಸೂರು, ಉಸ್ಮಾನ್ ಮೈಸೂರು, ಟೀಂ ಟೈಗರ್ಸ್ ಮಂಗಳೂರು ಅಧ್ಯಕ್ಷ ನಿಶಾದ್ ಅಹಮದ್, ವಾಯ್ಸ್ ಆಫ್ ಬ್ಲಡ್ ಡೋನರ್ಸ್ನ ಅಧ್ಯಕ್ಷ ರವೂಫ್ ಬಂದರ್, ಸಲಾಂ ಎಮ್ಮೆಕೆರೆ ಮತ್ತಿತರರು ಉಪಸ್ಥಿತರಿದ್ದರು.

- Advertisement -