Home ಟಾಪ್ ಸುದ್ದಿಗಳು ಸ್ಕಾರ್ಫ್ ವಿವಾದ: ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪಸಂಖ್ಯಾತರಿಗೆ ಒಂದು ನ್ಯಾಯವೇಕೆ- ರಕ್ಷಾ ರಾಮಯ್ಯ

ಸ್ಕಾರ್ಫ್ ವಿವಾದ: ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪಸಂಖ್ಯಾತರಿಗೆ ಒಂದು ನ್ಯಾಯವೇಕೆ- ರಕ್ಷಾ ರಾಮಯ್ಯ

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಹೇಳಿಕೆಗೆ ಆಕ್ರೋಶ

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಅಶಿಸ್ತು ಎಂದು ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪಸಂಖ್ಯಾತರಿಗೆ ಒಂದು ನ್ಯಾಯವೇಕೆ ಎಂದು ಪ್ರಶ್ನಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಾ ರಾಮಯ್ಯ, ಮಾನ್ಯ ಶಿಕ್ಷಣ ಸಚಿವ ಬಿ ನಾಗೇಶ್ ಅವರೆ, ತಮ್ಮ ಮೂರ್ಖ ಹೇಳಿಕೆ ಪ್ರಕಾರ ಶಾಲೆಯಲ್ಲಿ ಶಾರದಾ ಪೂಜೆ, ಗಣೇಶೋತ್ಸವ ಆಚರಿಸಬಾರದು; ಹೆಣ್ಣು ಮಕ್ಕಳು ಕುಂಕುಮ, ಬಳೆ, ತಾಳಿ, ಕಾಲುಂಗುರ ತೊಡಬಾರದಲ್ಲವೆ ? ಬಹುಸಂಖ್ಯಾತರಿಗೆ ಒಂದು ನ್ಯಾಯ ಅಲ್ಪಸಂಖ್ಯಾತರಿಗೆ ಒಂದು ನ್ಯಾಯವೇಕೆ ? ತಮ್ಮ ಹೇಳಿಕೆ ಬಿಜೆಪಿ ಕೋಮು ರಾಜಕಾರಣದ ಸೀಮೆಯನ್ನು ಮೀರಿದ್ದಕ್ಕೆ ಉದಾಹರಣೆ ಬಿಜೆಪಿಯವರು ಕೋಮು ಮತ್ತು ಧರ್ಮ ರಾಜಕಾರಣ ಬಿಟ್ಟು ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಿ ಎಂದು ಕಿಡಿಕಾರಿದ್ದಾರೆ.


ಇತ್ತೀಚೆಗೆ ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ರಾಜ್ಯದ ಹಲವು ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಿರುವುದಕ್ಕೆ ಸಂಘಪರಿವಾರದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ವಿವಾದ ಸೃಷ್ಟಿಸಿದ್ದು,ಸ್ಕಾರ್ಫ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಿರುವುದಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version