Home ಟಾಪ್ ಸುದ್ದಿಗಳು ಆರು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಮ್ ಕೋರ್ಟ್ ಶಿಫಾರಸು

ಆರು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಮ್ ಕೋರ್ಟ್ ಶಿಫಾರಸು

ನವದೆಹಲಿ: ವಿವಿಧ ಹೈಕೋರ್ಟ್ ನ ಆರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಅಥವಾ ಸ್ವಂತ ಊರಿಗೆ ಕಳುಹಿಸಲು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್’ನಿಂದ ಪಾಟ್ನಾ ಹೈಕೋರ್ಟ್’ಗೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ. ಒರಿಸ್ಸಾದಿಂದ ಕಲ್ಕತ್ತಾಗೆ ನ್ಯಾಯಮೂರ್ತಿ ಚಿತ್ತರಂಜನ್ ದಾಸ್, ತ್ರಿಪುರಾದಿಂದ ಒರಿಸ್ಸಾಕ್ಕೆ ನ್ಯಾಯಮೂರ್ತಿ ಸುಭಾಸಿಸ್ ತಲಪಾತ್ರ, ಮಣಿಪುರದಿಂದ ಗುವಾಹಟಿಗೆ ನ್ಯಾಯಾಮೂರ್ತಿ ಲನುಸುಂಗ್ಕುಮ್ ಝಮೀರ್, ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಅವರನ್ನು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನಿಂದ ಬಾಂಬೆ ಹೈಕೋರ್ಟ್’ಗೆ ಮತ್ತು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರಬ್ ಅವರನ್ನು ಮಧ್ಯಪ್ರದೇಶದಿಂದ ದೆಹಲಿ ಹೈಕೋರ್ಟ್’ಗೆ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂ ದೇಶದ ಒಟ್ಟು 25 ಹೈಕೋರ್ಟ್‌ಗಳ ಪೈಕಿ 14 ನ್ಯಾಯಮೂರ್ತಿಗಳನ್ನು ಈಗಾಗಲೇ ವರ್ಗಾವಣೆ ಮಾಡಿದೆ.

Join Whatsapp
Exit mobile version