Home ಟಾಪ್ ಸುದ್ದಿಗಳು ಕಲ್ಲಿದ್ದಲು ಹಗರಣ: ಸಂಸದ ಅಭಿಷೇಕ್ ಬ್ಯಾನರ್ಜಿ, ಪತ್ನಿಯ ಇಡಿ ವಿಚಾರಣೆ ದೆಹಲಿ ಬದಲು...

ಕಲ್ಲಿದ್ದಲು ಹಗರಣ: ಸಂಸದ ಅಭಿಷೇಕ್ ಬ್ಯಾನರ್ಜಿ, ಪತ್ನಿಯ ಇಡಿ ವಿಚಾರಣೆ ದೆಹಲಿ ಬದಲು ಕೋಲ್ಕತ್ತಾಗೆ ಸುಪ್ರೀಮ್ ಕೋರ್ಟ್ ಸೂಚನೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ಪತ್ನಿ ರುಜಿರಾ ನರೋಲಾ ಬ್ಯಾನರ್ಜಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅವರನ್ನು ಇಡಿ ಇಲಾಖೆ ದೆಹಲಿಯಲ್ಲಿ ವಿಚಾರಣೆ ನಡೆಸುವಂತೆ ಹೈಕೋರ್ಟ್ ನೀಡಿದ ಆದೇಶಕ್ಕೆ ಮೇ 17 ರಂದು ಸುಪ್ರೀಮ್ ಕೋರ್ಟ್ ತಡೆ ನೀಡಿದೆ.

ಅದಾಗ್ಯೂ ನೋಟಿಸ್ ನೀಡಿದ 24 ಗಂಟೆಗಳ ಒಳಗೆ ಅವರನ್ನು ಕೋಲ್ಕತ್ತಾದಲ್ಲಿ ವಿಚಾರಣೆ ನಡೆಸುವಂತೆ ಇಡಿ ಇಲಾಖೆಗೆ ಅನುಮತಿ ನೀಡಿದೆ.

ಇಡಿ ಇಲಾಖೆಯ ತಂಡದ ವಿರುದ್ಧ ಕೋಲ್ಕತ್ತಾದಲ್ಲಿ ಯಾವುದೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಳ್ಳದಂತೆ ಖಚಿತಪಡಿಸುವ ಜವಾಬ್ದಾರಿ ಪಶ್ಚಿಮ ಬಂಗಾಳ ಸರ್ಕಾರದ ಮೇಲಿದೆ, ತಪ್ಪಿದರೆ . ಸಹಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version