ಮಂಗಳೂರು | SBV ವತಿಯಿಂದ ಮುಅಲ್ಲಿಂ ಡೇ ಆಚರಣೆ

Prasthutha|

ಮಂಗಳೂರು: ಸಮಸ್ತ ಕೇರಳ ಜಂಯ್ಯತುಲ್ ಮುಅಲ್ಲೀಮೀನ್ ದ.ಕ ಜಿಲ್ಲೆಯ ಮುಅಲ್ಲಿಂ ಡೇ‌ ಅಂಗವಾಗಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸ ಇದರ ವಿದ್ಯಾರ್ಥಿಗಳ ಸಂಘ ಎಸ್ಬಿವಿ ವತಿಯಿಂದ ಮುಅಲ್ಲಿಂ ಡೇ ಆಚರಿಸಲಾಯಿತು.

- Advertisement -

ಈ ವೇಳೆ ಮಸೀದಿ ಆವರಣ ಸೇರಿ ಮಸೀದಿ ಸುತ್ತಮುತ್ತಲಿನ ಪ್ರದೇಶಗಳನ್ನು ವಿದ್ಯಾರ್ಥಿಗಳು ಸೇರಿ ಸ್ವಚ್ಚ ಗೊಳಿಸಲಾಯಿತು. ಬಳಿಕ ಮಾತನಾಡಿದ ಹಯಾತುಲ್ ಇಸ್ಲಾಂ ಬದ್ರಿಯ ಜುಮಾ ಮಸೀದಿ ಖತೀರಾದ ನಝೀರ್ ದಾರಿಮಿ ಶಂಭೂರ್ ಸಮಸ್ತ ಕೇರಳ ಜಂಯ್ಯತುಲ್ ಮುಅಲ್ಲೀಮೀನ್ ದ.ಕ ಜಿಲ್ಲೆಯು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಭದ್ದತೆ ಮೂಡಿಸುವ ನಿಟ್ಟಿನಲ್ಲಿ ಮುಅಲ್ಲಿಂ ಡೇ ದಂತಹ ವಿಶೇಷ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಮತ್ತು ಸೌಹಾರ್ದತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಮಾತ್ರವಲ್ಲದೆ ಸ್ವಚ್ಚತೆಯು ಇಮಾನ್ ನ ಅರ್ಧ ಭಾಗವಾಗಿದೆ ಅದರಂತೆ ಈ ಯೋಜನೆ ಮೂಲಕ ವಿದ್ಯಾರ್ಥಿಗಳಲ್ಲಿ ನೈರ್ಮಲ್ಯದ ಅರಿವು ಮೂಡಿಸಿ ಸ್ವಚ್ಚತಾ ಜಾಗೃತಿ ಮೂಡಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಗುರುಗಳಾದ ಅಬ್ದುಲ್ಲ ದಾರಿಮಿ ಸಜೀಪ , ಎಸ್ಬಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಹ್ಮದ್ ಬದವಿ, ಉಪಾಧ್ಯಕ್ಷ ಮಹಮ್ಮದ್ ಅಝೀಮ್, ಕಾರ್ಯದರ್ಶಿ ಮಹಮ್ಮದ್ ಮುದಸ್ಸೀರ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp