Home ಕರಾವಳಿ ಕೂರ್ನಡ್ಕ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ: ಸ್ನೇಹಕೂಟ ಟ್ರೋಫಿ ಕ್ರೀಡಾಕೂಟ

ಕೂರ್ನಡ್ಕ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ: ಸ್ನೇಹಕೂಟ ಟ್ರೋಫಿ ಕ್ರೀಡಾಕೂಟ

ಪುತ್ತೂರು: ಇಲ್ಲಿನ ಕೂರ್ನಡ್ಕ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ ಪ್ರಯುಕ್ತ ಸ್ನೇಹಕೂಟ ಟ್ರೋಫಿ ಕ್ರೀಡಾಕೂಟವು ಮರೀಲ್ ಮೈದಾನದಲ್ಲಿ ನಡೆಯಿತು.   

ಕಾರ್ಯಕ್ರಮದ ಉದ್ಘಾಟನೆಯನ್ನು ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷರಾದ ಕೆ.ಎಚ್ ಖಾಸಿಂ ಹಾಜಿ  ನೆರವೇರಿಸಿದರು. ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಸಲೀಂ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಮಾತನಾಡಿ, ಕ್ರೀಡೆಗಳು ಆರೋಗ್ಯಕ್ಕೆ ಉಪಕಾರಿಯಾಗಿದೆ. ಇಂದು ಹೆಚ್ಚಿನ ಯುವಕರು ದುಶ್ಚಟಗಳಿಂದ ಆರೋಗ್ಯವನ್ನು ಕೆಡಿಸುತ್ತಿದ್ದು,  ಆರೋಗ್ಯಕ್ಕೆ ಮಾರಕವಾದ ಎಲ್ಲ ದುಶ್ಚಟಗಳಿಂದ ಯುವಕರು ದೂರ ಸರಿಯಬೇಕು. ಕ್ರೀಡೆಗಳಿಂದ ಸಮಾಜದಲ್ಲಿ ಐಕ್ಯತೆ, ಸೌಹಾರ್ದತೆ ನಿರ್ಮಾಣವಾಗಲಿ ಎಂದು ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಸ್ನೇಹಕೂಟ ಟ್ರೋಫಿ – ಕ್ರೀಡಾಕೂಟ

 ಕ್ರೀಡಾಕೂಟದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ, ಫುಟ್ಬಾಲ್, ನೂರು ಮೀಟರ್ ಓಟ, ಹಗ್ಗ ಜಗ್ಗಾಟ ಹಾಗೂ ವಿಕೆಟ್ ಶೂಟ್ ಬಾಲ್ ಕ್ರೀಡೆಗಳು ಇದ್ದು, ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೂರ್ನಡ್ಕ ಮಸೀದಿ ಕಾರ್ಯದರ್ಶಿ ಅಝೀಝ್ ಫ್ರೂಟ್ಸ್ , ಹನಫಿ ಮಸೀದಿ ಕಾರ್ಯದರ್ಶಿ ರಿಯಾಝ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೆ.ಎ, ಪಿಎಫ್ ಐ ಸಿಟಿ ಡಿವಿಝನ್ ಅಧ್ಯಕ್ಷ ಉಮ್ಮರ್ ಕೆ.ಎಸ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕೂರ್ನಡ್ಕ ಇದರ ಅಧ್ಯಕ್ಷ ಸಾದಿಕ್ ಹಾಜಿ, ಕಾರ್ಯದರ್ಶಿ ಲಬೀಬ್ AXN ,  ಮೊಟ್ಟೆತ್ತಡ್ಕ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನವಾಝ್, ಕೂರ್ನಡ್ಕ ಸಲ್ ಸಬೀಲ್ ಯಂಗ್ ಮೆನ್ಸ್ ಕಾರ್ಯದರ್ಶಿ ಆಸಿಫ್ ಅಚ್ಚು, ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ಅಶ್ರಫ್ ಎ.ಕೆ , ಮೊದಲಾದವರು ಉಪಸ್ಥಿತರಿದ್ದರು. ಸಲ್ ಸಬೀಲ್ ಯಂಗ್ ಮನ್ಸ್ ಅಧ್ಯಕ್ಷ ಸಿರಾಜ್ ಎ.ಕೆ ಸ್ವಾಗತಿಸಿ, ವಂದಿಸಿದರು.

Join Whatsapp
Exit mobile version