Home ಗಲ್ಫ್ ಭಾರತ ಸೇರಿದಂತೆ ಕೋವಿಡ್ ರೆಡ್ ಲಿಸ್ಟ್ ನಲ್ಲಿರುವ ದೇಶಗಳಿಗೆ ಭೇಟಿ ನೀಡಿದವರಿಗೆ 3 ವರ್ಷಗಳ ಪ್ರಯಾಣ...

ಭಾರತ ಸೇರಿದಂತೆ ಕೋವಿಡ್ ರೆಡ್ ಲಿಸ್ಟ್ ನಲ್ಲಿರುವ ದೇಶಗಳಿಗೆ ಭೇಟಿ ನೀಡಿದವರಿಗೆ 3 ವರ್ಷಗಳ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

ಭಾರತ ಸೇರಿದಂತೆ ಕೋವಿಡ್ ರೆಡ್ ಲಿಸ್ಟ್ ನಲ್ಲಿರುವ ದೇಶಗಳಿಗೆ ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಸೌದಿ ಅರೇಬಿಯಾ ಮೂರು ವರ್ಷಗಳ ಪ್ರಯಾಣ ನಿಷೇಧ ಮತ್ತು ಭಾರಿ ದಂಡ ವಿಧಿಸಿ ಆದೇಶಿಸಿದೆ.

ಭಾರತ, ಯುಎಇ, ಲಿಬಿಯಾ, ಸಿರಿಯಾ, ಲೆಬನಾನ್, ಯೆಮೆನ್, ಇರಾನ್, ಟರ್ಕಿ, ಅರ್ಮೇನಿಯಾ, ಇಥಿಯೋಪಿಯಾ, ಸೊಮಾಲಿಯಾ, ಕಾಂಗೋ, ಅಫ್ಘಾನಿಸ್ತಾನ, ವೆನೆಜುವೆಲಾ, ಬೆಲಾರಸ್ ಮತ್ತು ವಿಯೆಟ್ನಾಂ ರೆಡ್ ಲಿಸ್ಟ್‌ನಲ್ಲಿರುವ ದೇಶಗಳಾಗಿವೆ.

ಭಾರತ ಸೇರಿದಂತೆ ಕೋವಿಡ್ ಸೋಂಕು ಹೆಚ್ಚಾಗಿರುವ ದೇಶಗಳಿಗೆ ಪ್ರಯಾಣಿಸದಂತೆ ಸೌದಿ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಸೌದಿ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಎಂದು ಸರ್ಕಾರಿ ಸಂಸ್ಥೆ ಸೌದಿ ಪ್ರೆಸ್ ಏಜೆನ್ಸಿ (ಎಸ್‌ಪಿಎ) ವರದಿ ಮಾಡಿದೆ.

ರೆಡ್ ಲಿಸ್ಟ್ನಲ್ಲಿರುವ ದೇಶಗಳಿಗೆ ಪ್ರಯಾಣಿಸುವ ಬಗ್ಗೆ ನಾಗರಿಕರು ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕು ಹೆಚ್ಚಾಗಿರುವ ಪ್ರದೇಶಕ್ಕೆ ಪ್ರಯಾಣಿಸಬಾರದು. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವಾಲಯ ಸೌದಿ ನಾಗರಿಕರಿಗೆ ಮನವಿ ಮಾಡಿದೆ.

Join Whatsapp
Exit mobile version