ಸೌದಿ ಕಾರ್ಮಿಕರ ಬಹುನಿರೀಕ್ಷಿತ ಉದ್ಯೋಗ ಕಾನೂನು ಶೀಘ್ರದಲ್ಲೇ ಜಾರಿ

Prasthutha|

ರಿಯಾದ್ : ಕಾರ್ಮಿಕರ ವಿವಾದಗಳನ್ನು ತೊಡೆದುಹಾಕಲು ಹಾಗೂ ಉದ್ಯೋಗದಾತ ಮತ್ತು ಉದ್ಯೋಗಿಗಳ ನಡುವಿನ ಒಪ್ಪಂದದ ಸಂಬಂಧವನ್ನು ಸುಧಾರಿಸುವ ಉದ್ದೇಶದಿಂದ ಸೌದಿ ಕಾರ್ಮಿಕರ ಬಹುನಿರೀಕ್ಷಿತ ಪರಿಷ್ಕೃತ ಉದ್ಯೋಗ ಕಾನೂನುಗಳು ಮಾರ್ಚ್ 14ರ ಭಾನುವಾರದಿಂದ ಜಾರಿಗೆ ಬರಲಿವೆ ಎಂದು ಸೌದಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಘೋಷಣೆ ಮಾಡಿದೆ.

- Advertisement -

ಈ ಯೋಜನೆಯು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ವಿದೇಶೀ ಕಾರ್ಮಿಕರಿಗೂ ಅನ್ವಯವಾಗಲಿದೆ. ಆದರೆ ಈ ಬದಲಾವಣೆ ಗೃಹ ಕಾರ್ಮಿಕರಿಗೆ ಅನ್ವಹಿಸುವುದಿಲ್ಲ. ಅಬ್ಷೀರ್ ಮತ್ತು ಖಿವಾ ಮುಂತಾದ ಪೋರ್ಟಲ್ ಗಳ ಮೂಲಕ ಈ ಸೇವೆ ಲಭ್ಯವಿದೆ.

ಪರಿಷ್ಕೃತ ಕಾನೂನಿನ ಪ್ರಯೋಜನ

- Advertisement -

1. ಕಾರ್ಮಿಕ ಮತ್ತು ಉದ್ಯೋಗದಾತ ನಡುವೆ ಸಹಿ ಮಾಡಿದ ಒಪ್ಪಂದದ ಆಧಾರದ ಮೇಲೆ ಕಾರ್ಮಿಕ ವಿವಾದಗಳಿಗೆ ಸಂಬಂಧಿಸಿದ ತೀರ್ಪು ನೀಡಲಾಗುತ್ತದೆ.

2. ಒಪ್ಪಂದದ ಅವಧಿ ಮುಗಿದ ನಂತರ ಉದ್ಯೋಗಿಯು ಉದ್ಯೋಗದಾತರ ಒಪ್ಪಿಗೆಯಿಲ್ಲದೆ ಉದ್ಯೋಗಗಳನ್ನು ಬದಲಾಯಿಸಲು ಮತ್ತು ಪ್ರಾಯೋಜಕತ್ವವನ್ನು ಬದಲಾಯಿಸಲು ಅನುಮತಿಸಲಾಗುವುದು.

3. ಒಪ್ಪಂದದ ಅವಧಿಯೊಳಗೆ ಕೆಲಸಗಾರನು ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಉದ್ಯೋಗದಾತರಿಗೆ 90 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಈ ರೀತಿಯಾಗಿ ಸೇವೆಯನ್ನು ಕೊನೆಗೊಳಿಸಿದರೆ ಉದ್ಯೋಗದಾತರಿಗೆ ಪರಿಹಾರವನ್ನು ಪಾವತಿಸಲು ಕೆಲಸಗಾರನು ಜವಾಬ್ದಾರನಾಗಿರುತ್ತಾನೆ.

4. ಒಪ್ಪಂದದ ಅವಧಿ ಮುಗಿಯುವ ಮೊದಲು ನೌಕರನನ್ನು ವಜಾ ಮಾಡಿದರೆ ಉದ್ಯೋಗದಾತನು ಕೆಲಸಗಾರನಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ.

5. ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಒಪ್ಪಂದದ ಸೇವೆ ಕೊನೆಗೊಂಡಲ್ಲಿ ಕೆಲಸಗಾರನು ತನ್ನದೇ ಆದ ನಿರ್ಗಮನ ಮತ್ತು ಮರು- ಪ್ರವೇಶ ವೀಸಾಗಳನ್ನು ಪಡೆದುಕೊಂಡು ಮನೆಗೆ ಮರಳಬಹುದು. ಇದಕ್ಕೆ ಪ್ರಯೋಜಕರ ಅನುಮತಿ ಅಗತ್ಯವಿಲ್ಲ.

ಕೆಲಸಗಾರನು ದೇಶವನ್ನು ತೊರೆದಾಗ ಪ್ರಾಯೋಜಕರಿಗೆ ವಿದ್ಯುನ್ಮಾನವಾಗಿ ಸಂದೇಶ ಲಭಿಸಲಿದೆ.

Join Whatsapp