Home ಟಾಪ್ ಸುದ್ದಿಗಳು ಸೌದಿ ಪ್ರೀಮಿಯರ್ ಲೀಗ್ 3ನೇ ಆವೃತಿ | ಮ್ಯಾಕ್ ಝಿಗ್ಮ ಚಾಂಪಿಯನ್, ಫಾಸ್ಟೆಕ್ ವಾರಿಯರ್ಸ್ ರನ್ನರ್...

ಸೌದಿ ಪ್ರೀಮಿಯರ್ ಲೀಗ್ 3ನೇ ಆವೃತಿ | ಮ್ಯಾಕ್ ಝಿಗ್ಮ ಚಾಂಪಿಯನ್, ಫಾಸ್ಟೆಕ್ ವಾರಿಯರ್ಸ್ ರನ್ನರ್ ಅಪ್

ದಮಾಮ್: ಮೂರು ವಾರಗಳಿಂದ ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ನಡೆದ ಸೌದಿ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದೆ. ಮ್ಯಾಕ್ ಝಿಗ್ಮ ಮತ್ತು ಫಾಸ್ಟೆಕ್ ವಾರಿಯರ್ಸ್ ತಂಡಗಳ ನಡುವೆ ನಡೆದ ಫೈನಲ್ ಹಣಾಹಣಿಯಲ್ಲಿ ಫಾಸ್ಟೆಕ್ ತಂಡವನ್ನು ಮಣಿಸಿದ ಝಿಗ್ಮ, ಸೌದಿ ಪ್ರೀಮಿಯರ್ ಲೀಗ್ ನ 3 ನೇ ಆವೃತಿಯ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಮ್ಯಾಕ್ ಝಿಗ್ಮ ತಂಡದ ರಶೀದ್ ಉತ್ತಮ ಬ್ಯಾಟ್ಸ್ ಮನ್, ಕಿಶೋರ್ ಬೆಸ್ಟ್ ಬೌಲರ್, ವಿಕೇಟ್ ಕೀಪರ್ ಪ್ರಶಸ್ತಿ ಫಾಸ್ಟೆಕ್ ತಂಡದ ನೈಮುಲ್ ಅಶ್ರಫ್ ಕೊಂಚಾರ್ ಪಡೆದುಕೊಂಡರು. ಮ್ಯಾಕ್ ಝಿಗ್ಮ ತಂಡದ ನಾಯಕ  ಬಾಲೂ ಬಿಜು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಮ್ಯಾಕ್ ಝಿಗ್ಮ, ಫಾಸ್ಟೆಕ್ ವಾರಿಯರ್ಸ್,  ಕೆಎಮ್ ಟಿ ಸ್ಟೈಕರ್ಸ್ ಯುನಿಫೈಡ್ ತಂಡಗಳು ಸೆಮಿಫೈನಲ್ ಹಂತದಲ್ಲಿ ಆಡಿದ್ದವು. ಫಾಸ್ಟೆಕ್ ವಾರಿಯರ್ಸ್ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿತು. ಮೂರು ಮತ್ತು ನಾಲ್ಕನೇ ಸ್ಥಾನದಲಿದ್ದ ಕೆಎಮ್ ಟಿ ಸ್ಟೈಕರ್ಸ್ ಮತ್ತು ಯುನಿಫೈಡ್ ನಡುವೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಯುನಿಫೈಡ್ ಗೆಲುವಿನ ನಗೆ ಬೀರಿತ್ತು. ಆದರೆ ದ್ವಿತೀಯ ಸೆಮಿಫೈನಲ್ ನಲ್ಲಿ ಮ್ಯಾಕ್ ಝಿಗ್ಮ ಎದುರು ಯುನಿಫೈಡ್ ಮುಗ್ಗರಿಸಿತ್ತು.

ಸ್ನೇಹದೀಪ ಎಚ್ ಐವಿ ಮಕ್ಕಳ ಸಹಾಯಾರ್ಥವಾಗಿ ನಡೆದ ಸೌದಿ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯ ಪ್ರಾಯೋಜಕತ್ವವನ್ನು ಅಡ್ಕ ಕಾಂಟ್ರಾಕ್ಟಿಂಗ್ ಮತ್ತು ಫಹದ್ ಅಲ್ ತಮೀಮಿ ವಹಿಸಿಕೊಂಡಿತ್ತು. ಶರೀಫ್ ಅಲ್ ಮುಝೈನ್ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಅಡ್ಕ ಕಾಂಟ್ರಾಕ್ಟಿಂಗ್ ಸಂಸ್ಥೆಯ ಶೇಕ್ ಅಹ್ಮದ್ ಬಾವ ಮತ್ತು  ಫಹದ್ ಅಲ್ ತಮೀಮಿ ಸಂಸ್ಥೆಯ ವ್ಯವಹಾರ ಸಲಹೆಗಾರರಾದ ಅಬ್ದುಲ್ ಅಝೀಝ್  ಉಪಸ್ಥಿತರಿದ್ದರು. ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತರಾಗಿರುವ ಮುಸ್ತಾಕ್ ಅಹ್ಮದ್ ಕಾರ್ಕಳ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

Join Whatsapp
Exit mobile version