11 ದೇಶಗಳ ಪ್ರಜೆಗಳ ಪ್ರಯಾಣ ನಿಷೇಧವನ್ನು ತೆಗೆದು ಹಾಕಿದ ಸೌದಿ ಅರೇಬಿಯಾ

Prasthutha|

►ಭಾರತದ ಪ್ರಯಾಣಿಕರಿಗೆ ಇದೆಯೇ ಅವಕಾಶ ?

- Advertisement -

ಕೊರೊನಾ ವೈರಸ್ ಹರಡುವುದನ್ನು ತಡೆಯಲು ವಿಧಿಸಲಾದ 11 ದೇಶಗಳಿಂದ ಬರುವ ಪ್ರಯಾಣಿಕರ ಮೇಲಿನ ನಿಷೇಧವನ್ನು ಸೌದಿ ಅರೇಬಿಯಾ ತೆಗೆದುಹಾಕಿದೆ. ಆದರೆ ಕ್ವಾರಂಟೈನ್ ಕಾರ್ಯವಿಧಾನಗಳ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸೌದಿ ರಾಷ್ಟ್ರೀಯ ಸುದ್ದಿ ಸಂಸ್ಥೆ ತಿಳಿಸಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್, ಜರ್ಮನಿ, ಅಮೆರಿಕಾ, ಐರ್ಲೆಂಡ್, ಇಟಲಿ, ಪೋರ್ಚುಗಲ್, ಇಂಗ್ಲಂಡ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ಫ್ರಾನ್ಸ್ ಮತ್ತು ಜಪಾನ್ ನ ಪ್ರಯಾಣಿಕರಿಗೆ ಭಾನುವಾರದಿಂದ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಆಂತರಿಕ ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ಎಸ್ ಪಿಎ ವರದಿ ಮಾಡಿದೆ.

- Advertisement -

ಈ 11 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಕಾಣಿಸಿಕೊಂಡಿಲ್ಲ. ಇದರಿಂದಾಗಿ ಭಾರತೀಯರಿಗೆ  ಸೌದಿ ಪ್ರವೇಶಕ್ಕೆ ಇನ್ನಷ್ಟು ದಿನ ಕಾಯಲೇ ಬೇಕಾಗಿದೆ

Join Whatsapp