ಮೇ 17 ರ ಬಳಿಕವೂ ಭಾರತ – ಸೌದಿ ವಿಮಾನ ಹಾರಾಟವಿಲ್ಲ | ಅನಿವಾಸಿ ಭಾರತೀಯರಲ್ಲಿ ಮುಂದುವರೆದ ನಿರಾಶೆ !

Prasthutha: April 22, 2021

ರಿಯಾದ್ :  ಜಾಗತಿಕ ಮಟ್ಟದಲ್ಲಿ ಇನ್ನೂ ತನ್ನ ಕರಾಳತೆಯನ್ನು ಕಡಿಮೆಗೊಳಿಸದ ಕೋವಿಡ್ -19 ತಡೆಯುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಮೇ 17 ರ ಬಳಿಕವೂ  ತನ್ನ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧವನ್ನು ಮುಂದುವರೆಸಲಿದೆ ಎನ್ನಲಾಗಿದೆ. ಭಾರತ ಸೇರಿದಂತೆ ಒಟ್ಟು 20 ರಾಷ್ಟ್ರಗಳಿಗೆ ಈ ನಿಷೇಧದ ಬಿಸಿ ತಟ್ಟಲಿದೆ. ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ಹೇಳಿರುವ ಸೌದಿಯಾ ವಿಮಾನಯಾನ ಸಂಸ್ಥೆ, ಮೇ 17 ರ ಬಳಿಕವೂ ತಮ್ಮ ಸೇವೆಯ ಅಲಭ್ಯತೆಯ ಕುರಿತು ತಿಳಿಸಿದೆ.

ಆಂತರಿಕ ಸಚಿವಾಲಯ ಹೆಸರಿಸಿಸುವ 20 ರಾಷ್ಟ್ರಗಳಲ್ಲಿ ಭಾರತ ಸೇರಿದಂತೆ ಅರ್ಜೆಂಟೀನಾ, ಜರ್ಮನಿ, ಪೋರ್ಚುಗಲ್, ಟರ್ಕಿ, ಐರ್ಲೆಂಡ್, ಇಟಲಿ, ಪಾಕಿಸ್ತಾನ, ಯುಎಇ, , ಯುಎಸ್, ಇಂಡೋನೇಷ್ಯಾ, ಸ್ವೀಡನ್, ಸ್ವಿಟ್ಜರ್ಲೆಂಡ್, ಈಜಿಪ್ಟ್,  ಜಪಾನ್, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಬ್ರೆಜಿಲ್, ಯುಕೆ, ಲೆಬನಾನ್, ಫ್ರಾನ್ಸ್ ದೇಶಗಳು ಆ ಪಟ್ಟಿಯಲ್ಲಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!