Home ಗಲ್ಫ್ ಸೌದಿ ಅರೇಬಿಯಾ: ಶ್ವೇತಭವನದ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ ರಾಜಕುಮಾರ

ಸೌದಿ ಅರೇಬಿಯಾ: ಶ್ವೇತಭವನದ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ ರಾಜಕುಮಾರ

ರಿಯಾದ್: ಯುದ್ಧಪೀಡಿತ ಉಕ್ರೇನ್’ಗೆ ಅಂತಾರಾಷ್ಟ್ರೀಯ ಬೆಂಬಲ ಸೂಚಿಸಲು ಮತ್ತು ತೈಲ ಬೆಲಗಳ ಏರಿಕೆಯನ್ನು ತಡೆಯಲು ಅಮೆರಿಕದ ಶ್ವೇತಭವನ ಮೂಲಗಳಿಂದ ಬಂದ ಕರೆಗಳನ್ನು ಸ್ವೀಕರಿಸಲು ಸೌದಿ ರಾಜಕುಮಾರ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಪ್ರತಿಕ್ರಿಯಿಸಿದ ಅಮೆರಿಕ ಅಧಿಕಾರಿಗಳು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಯುಎಇ ದೊರೆ ಶೇಖ್ ಮುಹಮ್ಮದ್ ಬಿನ್ ಝಾಹಿದ್ ಅಲ್ ನಹ್ಯಾನ್ ಎಂಬಿಬ್ಬರೂ ಈ ವಾರದಲ್ಲಿ ಅಧ್ಯಕ್ಷ ಜೋ ಬೈಡೆನ್ ಅವರ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕರು ಯಮೆನ್ ಅನ್ನು ಬೆಂಬಲಿಸದ ಹೊರತು ಹೆಚ್ಚುತ್ತಿರುವ ತೈಲ ಬೆಲೆಯೇರಿಕೆಯನ್ನು ತಡೆಯುವಲ್ಲಿ ಪರ್ಷಿಯನ್ ಗಲ್ಫ್ ಒಕ್ಕೂಟ ನೆರವಾಗುವುದಿಲ್ಲ ಎಂದು ಸೂಚಿಸಿದೆ.

ಈ ಮಧ್ಯೆ ಪ್ರಸಕ್ತ ಇಂಧನ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಮುಂದಿನ ಚಳಿಗಾಲಗಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Join Whatsapp
Exit mobile version