ಮದೀನಾ: ಜಗತ್ತಿನ ಮುಸ್ಲಿಮರ 2 ಪವಿತ್ರ ಮಸ್ಜಿದ್ ಗಳ ಪೈಕಿ ಮದೀನಾ ಮಸ್ಜಿದ್ ನಲ್ಲಿ ಕೋವಿಡ್ ನಿರ್ಬಂಧವನ್ನು ತೆರವು ಗೊಳಿಸಿ ಮುಕ್ತ ನಮಾಝ್ ಗೆ ಅವಕಾಶ ಕಲ್ಪಿಸಲಾಗಿದೆ.
ಸಾಂಕ್ರಾಮಿಕ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸಾಮೂಹಿಕ ನಮಾಝ್ ಗೆ ನಿಯಂತ್ರಣ ಹೇರಿದ್ದ ಸೌದಿ ಹಜ್ಜ್ ಮತ್ತು ಉಮ್ರಾ ಸಚಿವಾಲಯ ಈ ನಿರ್ಬಂಧವನ್ನು ತೆಗೆದು ಹಾಕಿದೆ.
ಸೌದಿ ಪ್ರಾಧಿಕಾರದ ಈ ನೂತನ ಆದೇಶದನ್ವಯ ಇನ್ನು ಮುಂದಕ್ಕೆ ಪ್ರವಾದಿ ಮಸ್ಜಿದ್ ನಲ್ಲಿ ಜಾಗತಿಕ ಮುಸ್ಲಿಮರಿಗೆ ಮುಕ್ತ ನಮಝ್ ನಿರ್ವಹಣೆಗೆ ಅವಕಾಶ ನೀಡಿದಂತಾಗಿದೆ.
ತವಕ್ಕಲ್ನಾ ಅಪ್ಲೀಕೇಶನ್ ನಲ್ಲಿ ಇಮ್ಯೂನ್ ಸ್ಟೇಷಸ್ ಹೊಂದಿರುವವರು ಯಾವುದೇ ಸಮಯದಲ್ಲಿ ಇಲ್ಲಿ ನಮಾಝ್ ನಿರ್ವಹಿಸಬಹುದು. ಈ ಮಧ್ಯೆ ರೌಲಾ ಸಂದರ್ಶದ ನಿರ್ಬಂಧವನ್ನು ಮುಂದುವರಿಸಿದೆ.