ರಿಯಾದ್: ಗ್ರೀನ್ ಪಟ್ಟಿಯಲ್ಲಿ ರಾಷ್ಟ್ರಗಳು ಯಾತ್ರಿಕರು ಸೇರಿದಂತೆ ಪ್ರತಿದಿನ 70 ಸಾವಿರ ಉಮ್ರಾ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಕೋವಿಡ್ – 19 ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಪೂರ್ಣ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಉಮ್ರಾ ನಿರ್ವಹಿಸುವಂತೆ ಸಾರ್ವಜನಿಕರಲ್ಲಿ ಸೌದಿ ಪ್ರಾಧಿಕಾರ ಮನವಿ ಮಾಡಿದೆ. ಸೌದಿ ಪ್ರಾಧಿಕಾರ ಮತ್ತು ಸಂಬಂಧಿತ ಅಧಿಕಾರಿಗಳ ಸಹಯೋಗದೊಂದಿಗೆ ವಿದೇಶಿ ಮತ್ತು ದೇಶಿಯ ಯಾತ್ರಿಕರಿಗೆ ಅವಕಾಶ ನೀಡಲಾಗಿದೆ.
ಯುಎಇ, ದಕ್ಷಿಣ ಆಫ್ರೀಕಾ ಮತ್ತು ಅರ್ಜೇಂಟೀನಾ ಮೇಲಿದ್ದ ನಿರ್ಬಂಧವನ್ನು ಸೆಪ್ಟೆಂಬರ್ 7 ರಂದು ತೆಗೆದು ಹಾಕಿದ ಸೌದಿ ಆಂತರಿಕ ಸಚಿವಾಲಯ ಸೆಪ್ಟೆಂಬರ್ 8 ರಿಂದ ಪ್ರತಿದಿನ ಉಮ್ರಾ ನಿರ್ವಹಿಸಲು ಅವಕಾಶ ನೀಡಲಾಗಿದೆ. ಸಂಪೂರ್ಣ ಲಸಿಕೆ ಹಾಕಿಸಿದ ಯಾತ್ರಿಕರು ಆನ್ ಲೈನ್ ಮೂಲಕ ಸಲ್ಲಿಸಿ ಉಮ್ರಾ ನಿರ್ವಹಿಸಬಹುದೆಂದು ಸಚಿವಾಲಯ ಒತ್ತಿ ಹೇಳಿದೆ
ವಿದೇಶದಿಂದ ಆಗಮಿಸುವ ಯಾತ್ರಿಕರು ಸೌದಿ ಪ್ರಾಧಿಕಾರ ಅನುಮೋದಿಸಿದ ಲಸಿಕೆ ಮತ್ತು ಪ್ರಮಾಣಪತ್ರಗಳೊಂದಿಗೆ ಉಮ್ರಾ ನಿರ್ವಹಿಸಬಹುದು. ಮಾತ್ರವಲ್ಲ ಲಸಿಕೆ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
ಕೋವಿಡ್ – 19 ಸಾಂಕ್ರಾಮಿಕ ರೋಗದಿಂದಾಗಿ ಸುಮಾರು 18 ತಿಂಗಳ ಕಾಲ ಉಮ್ರಾ ನಿರ್ವಹಿಸಲು ಸೌದಿ ಪ್ರಾಧಿಕಾರ ತಾತ್ಕಾಲಿಕ ನಿಷೇಧ ಹೇರಿತ್ತು. ಪ್ರಸಕ್ತ ಸೌದಿ ಅರೇಬಿಯಾ ಗ್ರೀನ್ ಪಟ್ಟಿಯಲ್ಲಿರುವ ರಾಷ್ಟ್ರಗಳ ವಿದೇಶಿ ಯಾತ್ರಿಕರಿಗೆ ಅವಕಾಶ ನೀಡಿದೆ.
ಪ್ರಸ್ತುತ ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಈಜಿಪ್ಟ್, ಟರ್ಕಿ, ಬ್ರೆಜಿಲ್, ಇಥಿಯೋಪಿಯಾ, ವಿಯೆಟ್ನಾಂ, ಅಫ್ಘಾನಿಸ್ತಾನ ಮತ್ತು ಲೆಬನಾನ್ ರಾಷ್ಟ್ರಗಳ ಮೇಲಿನ ನಿಷೇಧವನ್ನು ಮುಂದುವರಿಸಿದೆ.