Home ಟಾಪ್ ಸುದ್ದಿಗಳು ಇಂದಿನಿಂದ ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿರ್ಬಂಧ

ಇಂದಿನಿಂದ ಭಾರತ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿರ್ಬಂಧ

ಜೆದ್ದಾ : ಕೊರೊನ ವೈರಸ್ ಸೋಂಕು ತಡೆಯುವ ಉದ್ದೇಶದಿಂದ 20 ದೇಶಗಳಿಂದ ಪ್ರಯಾಣಿಕರು ಆಗಮಿಸುವುದಕ್ಕೆ ಸೌದಿ ಅರೇಬಿಯಾ ನಿಷೇಧ ಹೇರಿದೆ. ಬುಧವಾರ ರಾತ್ರಿ 9 ಗಂಟೆಯಿಂದ ಈ ಆದೇಶ ಜಾರಿ ಬರಲಿದೆ.

ರಾಯಭಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಈ ನಿಷೇಧ ನೀತಿ ಅನ್ವಯವಾಗುವುದಿಲ್ಲ.

ಯುಎಇ, ಈಜಿಪ್ಟ್, ಲೆಬನಾನ್, ಟರ್ಕಿ, ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಇಟಲಿ, ಐರ್ಲ್ಯಾಂಡ್, ಸ್ವಿಝರ್ಲ್ಯಾಂಡ್, ಸ್ವೀಡನ್, ಬ್ರೆಝಿಲ್, ಅರ್ಜೆಂಟಿನ, ದಕ್ಷಿಣ ಆಫ್ರಿಕಾ, ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ಜಪಾನ್ ಸೇರಿದಂತೆ 20 ದೇಶಗಳ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.   

Join Whatsapp
Exit mobile version