ದೋಹಾ : ಕತಾರ್ ಮತ್ತು ಸೌದಿ ಅರೇಬಿಯಾ ನಡುವೆ ವೈಮಾನಿಕ, ಭೂ ಮತ್ತು ಸಮುದ್ರ ಮಾರ್ಗ ಗಡಿಗಳನ್ನು ತೆರೆಯಲು ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ. ಗಡಿಗಳು ಸೋಮವಾರ ರಾತ್ರಿಯಿಂದಲೇ ತೆರೆಯಲ್ಪಡುತ್ತವೆ ಎಂದು ಕುವೈತ್ ನ ವಿದೇಶಾಂಗ ಸಚಿವ ಎಚ್.ಇ. ಶೇಖ್ ಡಾ. ಅಹ್ಮದ್ ನಾಸ್ಸೆರ್ ಅಲ್ ಮುಹಮ್ಮದ್ ಅಲ್ ಸಬಾಹ್ ಹೇಳಿದ್ದಾರೆ.
ಇಂದು (ಸೋಮವಾರ) ಸಂಜೆಯಿಂದ ಕತಾರ್ ಮತ್ತು ಸೌದಿ ಅರೇಬಿಯಾ ನಡುವೆ ವೈಮಾನಿಕ, ಭೂ ಮತ್ತು ಸಮುದ್ರ ಮಾರ್ಗಗಳನ್ನು ತೆರೆಯಲು ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.