ಸೌದಿ ಅರೇಬಿಯಾ ರಾಷ್ಟ್ರೀಯ ದಿನಾಚರಣೆ| ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸೆಂಟ್ರಲ್ ಕಮಿಟಿ ವತಿಯಿಂದ ರಕ್ತದಾನ ಶಿಬಿರ

Prasthutha|

ಜಿದ್ದಾ: 91ನೇ ಸೌದಿ ಅರೇಬಿಯಾದ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸೆಂಟ್ರಲ್ ಕಮಿಟಿ ಹಾಗೂ ಕಿಂಗ್ ಅಬ್ದುಲ್ ಅಝೀಝ್ ಯೂನಿವರ್ಸಿಟಿ ಆಸ್ಪತ್ರೆ ಮತ್ತು ಬ್ಲಡ್ ಡೋನರ್ಸ್ ಪಾರ್ಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

- Advertisement -

 ಕಾರ್ಯಕ್ರಮ ವನ್ನು  ಡಾ| ಹುಸೇನ್ ಮನಿಯಾರ್ (ಕರ್ನಾಟಕ) ಉದ್ಘಾಟಿಸಿದರು.

ಡಾ |ಮಹ ಬದವಿ  (ಬ್ಲಡ್ ಬ್ಯಾಂಕ್ ನಿರ್ದೇಶಕರು,ಕಿಂಗ್ ಅಬ್ದುಲ್ ಅಝೀಝ್ ಯೂನಿವರ್ಸಿಟಿ ಆಸ್ಪತ್ರೆ ಜೆದ್ದಾ) ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶ್ರಫ್ ಮೊರಾಯೂರ್, (ಅಧ್ಯಕ್ಷರು ಇಂಡಿಯನ್ ಸೋಶಿಯಲ್ ಫೋರಂ ಸೌದಿ ನ್ಯಾಷನಲ್ ಕಮಿಟಿ), ಅಬ್ದುಲ್ ಘನಿ, (ಉಪಾಧ್ಯಕ್ಷರು ಇಂಡಿಯನ್ ಸೋಶಿಯಲ್ ಫೋರಂ ಜಿದ್ದಾ ಸೆಂಟ್ರಲ್ ಕಮಿಟಿ ಮತ್ತು ಚೇರ್ಮನ್  ಎಂಐಸಿ ಅಕಾಡೆಮಿ),ಆಲಿಕೋಯ  (ಪ್ರಧಾನ ಕಾರ್ಯದರ್ಶಿಗಳು ಇಂಡಿಯನ್ ಸೋಶಿಯಲ್ ಫೋರಂ ಜೆದ್ದಾ ಸೆಂಟ್ರಲ್ ಕಮಿಟಿ) ಉಪಸ್ಥಿತರಿದ್ದರು.ಅಲ್ ಅಮಾನ್,(ಸಂಚಾಲಕರು,ಬ್ಲಡ್ ಡೋನರ್ಸ್ ಪಾರ್ಕ್) ಕಾರ್ಯಕ್ರಮ ವನ್ನು ಸಂಯೋಜಿಸಿದರು.ಬೀರಾನ್ ಕುಟ್ಟಿ, ತಮೀಮುಲ್ ಅನ್ಸಾರಿ, ಆಸಿಫ್ ಗಂಜಿಮಟ, ಮೊಹಿದ್ದೀನ್ ಚೆನ್ನೈ,ಶಾಹುಲ್ ಹಮೀದ್ ರವರು ರವರು ಶಿಬಿರದ  ನೇತೃತ್ವವನ್ನು ವಹಿಸಿದ್ದರು.

- Advertisement -

ಬ್ಲಡ್ ಡೋನರ್ಸ್ ಪಾರ್ಕ್ ವಾಟ್ಸಪ್ ಗುಂಪಿನಲ್ಲಿ ರಕ್ತದಾನಕ್ಕಾಗಿ ಬಂದ ತುರ್ತು ಬೇಡಿಕೆಗಳನ್ನು ಪರಿಗಣಿಸಿ ಸ್ವತ: ರಕ್ತ ದಾನ ಮಾಡುವುದರೊಂದಿಗೆ ಇತರರನ್ನು ಪ್ರೇರೇಪಿಸಿ ರೋಗಿಗಳಿಗೆ ರಕ್ತದ ಅವಶ್ಯಕತೆಗಳನ್ನು ಪೂರೈಸುತ್ತಿದ್ದ ಕರ್ನಾಟಕದ ಮೊಹಮ್ಮದ್ ಶಾಹೀದ್ ಮತ್ತು ಮುಸ್ತಾಫಾ ಕಮಾಲ್ ,ತಮಿಳುನಾಡಿನ ಗ್ಲೆನ್ ಗೊಮೆಜ್ ಮತ್ತು ಡಾ ಅಹ್ಮದ್ ಪಾಶ ರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Join Whatsapp