Home ಗಲ್ಫ್ ಸೌದಿ ಅರೇಬಿಯಾ | IFF ವತಿಯಿಂದ ಈದ್ ಮಿಲನ್-2022 ಕುಟುಂಬ ಸಮ್ಮಿಲನ

ಸೌದಿ ಅರೇಬಿಯಾ | IFF ವತಿಯಿಂದ ಈದ್ ಮಿಲನ್-2022 ಕುಟುಂಬ ಸಮ್ಮಿಲನ

ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ ಅನಿವಾಸಿ ಕನ್ನಡಿಗರಿಗಾಗಿ ಈದ್ ಪ್ರಯುಕ್ತ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಅದ್ದೂರಿಯಾಗಿ ರಿಯಾದಿನಲ್ಲಿ ನಡೆಸಲಾಯಿತು.

ಸದಾ ವೃತ್ತಿಪರ ಜೀವನದಲ್ಲಿ ನಿರತರಾಗಿರುವ ಅನಿವಾಸಿಗರನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ‘ಈದ್ ಮಿಲನ್’ ವೆಂಬ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹಲವಾರು ಅನಿವಾಸಿಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

IFF ವತಿಯಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಹಲವಾರು ಸಾಂಸ್ಕ್ರತಿಕ, ಕಿರುನಾಟಕ, ಮನೋರಂಜನಾ ಕ್ರೀಡಾಕೂಟ ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ತಾಜುದ್ದೀನ್ ರವರು ಈದ್ ಮಿಲನ್ ಕಾರ್ಯಕ್ರಮವು ಭಾರತೀಯರನ್ನು ಒಂದುಗೂಡಿಸುವ ಕಿರು ಪ್ರಯತ್ನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮ ನಿರೂಪಣೆಯನ್ನು ಕವನ ವಾಚನ ಹಾಗೂ ಮನೋರಂಜನೆಯ ಮೂಲಕ ರಹೀಂ ತುಂಬೆಯವರು ನೆರವೇರಿಸಿದರು.

Join Whatsapp
Exit mobile version