ರಿಯಾದ್: ಕೋವಿಡ್ ಪ್ರಕರಣದ ಹೆಚ್ಚಳವನ್ನು ಮತ್ತೊಮ್ಮೆ ತಡೆಯುಲು ಸೌದಿ ಅರೇಬಿಯಾವು ತನ್ನ ನಾಗರಿಕರಿಗೆ ಭಾರತ ಸೇರಿದಂತೆ ಇತರೆ 15 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ನಿಷೇಧ ಹೇರಿದೆ.
ನೂತನ ಆದೇಶದನ್ವಯ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಭಾರತ, ಯೆಮೆನ್, ಸೊಮಾಲಿಯ, ಇಥಿಯೋಪಿಯಾ, ರಿಪಬ್ಲಿಕ್ ಆಫ್ ಕಾಂಗೋ, ಲಿಬಿಯಾ, ಇಂಡೋನೇಷ್ಯಾ, ವಿಯೆಟ್ನಾಂ, ಅರ್ಮೇನಿಯಾ, ರಷ್ಯಾ ಅಲ್ ಬೈದಾ, ವೆನೆಝುವೆಲಾ ರಾಷ್ಟ್ರಗಳಿಗೆ ಸೌದಿ ನಾಗರಿಕರು ಪ್ರಯಾಣಿಸುವುದನ್ನು ನಿಷೇಧಿಸಿದೆ ಎಂದು ಸೌದಿ ಡೈರೆಕ್ಟರೇಟ್ ಜನರಲ್ ಆಫ್ ಪಾಸ್ ಪೋಸ್ಟ್ (ಜವಾಝತ್) ಸಚಿವಾಲಯ ತಿಳಿಸಿದೆ.