2023ರ ರಮಝಾನ್’ಗೆ 10 ಅಂಶಗಳ ಮಾರ್ಗಸೂಚಿ ಪ್ರಕಟಿಸಿದ ಸೌದಿಅರೇಬಿಯಾ

Prasthutha|

ಜಿದ್ದಾ: ಮಾರ್ಚ್ 22ರಿಂದ ಆರಂಭವಾಗುವ ಪವಿತ್ರ ರಮಝಾನ್ ತಿಂಗಳಿಗೆ ಸೌದಿ ಅರೇಬಿಯಾ ಹತ್ತು ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ದಾನ, ಇಫ್ತಾರ್, ಧ್ವನಿವರ್ಧಕ ಮೊದಲಾದವುಗಳ ಮಾರ್ಗಸೂಚಿಗಳನ್ನು ಇದರಲ್ಲಿ ತಿಳಿಸಲಾಗಿದೆ.

- Advertisement -


ಇಸ್ಲಾಮಿಕ್ ವ್ಯವಹಾರಗಳು, ದವಾ ಗೈಡೆನ್ಸ್ ಮಂತ್ರಿ ಶೇಖ್ ಅಬ್ದುಲ್ಲತೀಫ್ ಬಿನ್ ಅಬ್ದುಲ್ಲಝೀಝ್ ಅಲ್ ಅಲ್ ಶೇಖ್ ಅವರು, ಈ ಮಾರ್ಗಸೂಚಿಯನ್ನು ಮಾರ್ಚ್ 10ರ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
1 ಇಫ್ತಾರ್/ಆಹಾರಕ್ಕಾಗಿ ಮಸೀದಿಗಳು ಹಣ ಸಂಗ್ರಹಿಸುವುದನ್ನು ನಿಷೇಧಿಸಲಾಗಿದೆ.
2 ಮಸೀದಿಯ ಹೊರಗೆ ಗುರುತಿಸಲಾದ ಸ್ಥಳಗಳಲ್ಲಿ ಅಂತಹ ಅಡುಗೆ ಮತ್ತು ಊಟದ ವ್ಯವಸ್ಥೆ ನಡೆಯಬೇಕು.

  1. ಊಟದ ವ್ಯವಸ್ಥೆ ಮಾಡುವುದು ಇಮಾಮ್ ಮತ್ತು ಐದು ಬಾರಿ ಆಝಾರ್ ಕರೆ ನೀಡುವ ಮುಅಝ್ಝಿನ್ ಜವಾಬ್ದಾರಿಯಾಗಿದೆ.
    4 ಅತ್ಯಗತ್ಯದ ಕೆಲಸದ ಹೊರತಾಗಿ ಈ ಇಬ್ಬರು ಇಡೀ ತಿಂಗಳು ಇಲ್ಲಿ ಹಾಜರಿರಬೇಕು.
    5 ಪ್ರಾರ್ಥನೆ ಸಲ್ಲಿಸುವವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಂಜೆಯ ಪ್ರಾರ್ಥನೆ ತರಾವೀಹ್ ಮತ್ತು ರಾತ್ರಿಯ ಪ್ರಾರ್ಥನೆ ತಹಜ್ಜದ್’ಗಳನ್ನು ಇವರು ಸರಿಯಾದ ಸಮಯಗಳಲ್ಲಿ ನಡೆಸಿ ಮುಗಿಸಬೇಕು.
    6 ಮಸೀದಿಯಲ್ಲಿ ರಮಝಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಇತಿಕಾಫ್ ನಿರ್ವಹಿಸುವ ಬೇಕಾದ ವ್ಯವಸ್ಥೆ ಮಾಡುವುದು ಕೂಡ ಅವರ ಜವಾಬ್ದಾರಿಯಾಗಿದೆ.
    7 ಮಸೀದಿಯೊಳಗೆ ಕ್ಯಾಮೆರಾ ಬಳಸಲು ಇಲ್ಲವೇ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ.
    8 ಪ್ರಾರ್ಥನೆಗೆ ಬರುವವರು ಮಕ್ಕಳನ್ನು ಮಸೀದಿಗೆ ಕರೆ ತರುವಂತಿಲ್ಲ.
    9 ಮಸೀದಿಯ ಧ್ವನಿವರ್ಧಕಗಳು ಯಾವುದೇ ಕಾರಣಕ್ಕೂ ಅತಿಯಾದ ಧ್ವನಿ ಹೊರಡಿಸದೆ ಮಿತಿಯನ್ನು ಹೊಂದಿರಬೇಕು.
    10 ಸಚಿವಾಲಯದ ಸುತ್ತೋಲೆಯಂತೆ ಪ್ರಾರ್ಥನೆ ಸಲ್ಲಿಸುವವರು ಮಸೀದಿಗಳಿಗೆ ಸಂಬಂಧಿಸಿದ ಉಪಯುಕ್ತ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಬೇಕು.
    ಆದರೆ ಈ ಮಾರ್ಗಸೂಚಿ ಮುಸ್ಲಿಂ ದೇಶಗಳಿಂದ ಟೀಕೆಗೆ ಒಳಗಾಗಿದೆ. ಇಸ್ಲಾಮಿಕ್ ಸಾರ್ವಜನಿಕ ಜೀವನಕ್ಕೆ ಮಿತಿ ಹೇರಲು ಸೌದಿ ಪ್ರಯತ್ನಿಸುತ್ತಿದೆ ಎಂದು ಟೀಕಿಸಲಾಗಿದೆ. ಮಸೀದಿಯ ಸ್ವಚ್ಛತೆ, ಪವಿತ್ರತೆ ಕಾಪಾಡಲು ಈ ಮಾರ್ಗಸೂಚಿಗಳು ಅಗತ್ಯ ಎಂದು ಸೌದಿಯ ಸದರಿ ಸಚಿವಾಲಯದ ವಕ್ತಾರರು ಸೌದಿಯ ಅಲ್ ಸೌದಿಯ ಚಾನೆಲ್’ಗೆ ತಿಳಿಸಿದ್ದಾರೆ.
    ಇಮಾಮರನ್ನು, ಪ್ರಾರ್ಥನೆಯವರನ್ನು, ಆರಾಧಕರನ್ನೂ ಯಾರೂ ದುರುಪಯೋಗ ಮಾಡಲು ಅವಕಾಶ ಆಗಬಾರದು ಎನ್ನುವುದಕ್ಕಾಗಿ ಫೋಟೋ ತೆಗೆಯಲು, ಕ್ಯಾಮೆರಾ ಬಳಸಲು ನಿಷೇಧ ಹೇರಲಾಗಿದೆ ಎಂದೂ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
Join Whatsapp