Home ಟಾಪ್ ಸುದ್ದಿಗಳು ದುರಹಂಕಾರವನ್ನು ಸತ್ಯಾಗ್ರಹ ಸೋಲಿಸಿದೆ: ಕೃಷಿ ಕಾಯ್ದೆ ರದ್ದತಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ದುರಹಂಕಾರವನ್ನು ಸತ್ಯಾಗ್ರಹ ಸೋಲಿಸಿದೆ: ಕೃಷಿ ಕಾಯ್ದೆ ರದ್ದತಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ನವದೆಹಲಿ: ಕಳೆದ ವರ್ಷ ಜಾರಿಗೆ ತಂದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ಪ್ರಧಾನಿಯ ನಡೆಯನ್ನು ಉಲ್ಲೇಖಿಸಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರ ಸತ್ಯಾಗ್ರಹ ದುರಂಹಕಾರ ಧೋರಣೆಯನ್ನು ಸೋಲಿಸಿದೆ ಎಂದು ತಿಳಿಸಿದ್ದಾರೆ.

ಗುರುನಾನಕ್ ಜಯಂತಿಯಂದೇ ಪ್ರಧಾನಿ ಮೋದಿ ಕೃಷಿ ಕಾಯ್ದೆಗಳ ರದ್ದತಿ ಘೋಷಣೆ ಮಾಡಿದ್ದಾರೆ. ರೈತರು ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿಕದ ಮಧ್ಯೆ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಇತರ ನಾಯಕರು ಕೂಡ ರೈತರನ್ನು ಅಭಿನಂದಿಸಿ ಟ್ವೀಟ್ ಮಾಡುವುದರ ಜೊತೆಗೆ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇದುವರೆಗೆ ಪ್ರತಿಭಟನಾನಿರತ 630ಕ್ಕೂ ಅಧಿಕ ರೈತರು ಸಾವನ್ನಪ್ಪಿದ್ದರು. ಕೃಷಿ ಕಾಯ್ದೆಯನ್ನು ವಿರೋಧಿಸಿದ್ದ ಹಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

Join Whatsapp
Exit mobile version