ಹೊಸದಿಲ್ಲಿ: ಯೂಟ್ಯೂಬ್ ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಸದ್ ಟಿವಿಯ ಯೂಟ್ಯೂಬ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಸಂಸದ್ ಟಿವಿಯು ಲೋಕಸಭೆ ಮತ್ತು ರಾಜ್ಯ ಸಭೆಯ ನೇರ ಪ್ರಸಾರ ಮತ್ತು ರೆಕಾರ್ಡ್ ಮಾಡಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಯುಟ್ಯೂಬ್ ಚಾನೆಲ್ ಆಗಿದೆ.
ಯೂಟ್ಯೂಬ್ ಸಮುದಾಯ ಮಾನದಂಡಗಳ ಪ್ರಕಾರ, ಚಾನಲ್ ಅಥವಾ ಖಾತೆಯನ್ನು ನಿಲ್ಲಿಸಲು ಹಲವು ಕಾರಣಗಳಿವೆ. ಸ್ಪ್ಯಾಮ್ ಮತ್ತು ಮೋಸದ ಸುದ್ದಿ, ಸೂಕ್ಷ್ಮ ವಿಷಯ, ಸೋಗು ಹಾಕುವುದು, ನಗ್ನತೆ ಮತ್ತು ಲೈಂಗಿಕ ವಿಷಯ, ಆತ್ಮಹತ್ಯೆ ಮತ್ತು ಸ್ವಯಂ ಗಾಯ, ಅಶ್ಲೀಲ ಭಾಷೆಯ ವೀಡಿಯೊಗಳು ಮುಂತಾದ ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಾಗಿವೆ. ಆದರೆ ಯಾವ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಸ್ಪಷ್ಟೀಕರಣಕ್ಕೆ ಗೂಗಲ್ ಗೆ ಕಳುಹಿಸಲಾದ ಮೇಲ್ ಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.