Home ಟಾಪ್ ಸುದ್ದಿಗಳು ಕುಡಿಯುವ ನೀರಿಗೆ ಸ್ಯಾನಿಟೈಸರ್ ಮಿಶ್ರಣ; ಮೂವರು ಕ್ರೀಡಾಪಟುಗಳು ಆಸ್ಪತ್ರೆಗೆ ದಾಖಲು

ಕುಡಿಯುವ ನೀರಿಗೆ ಸ್ಯಾನಿಟೈಸರ್ ಮಿಶ್ರಣ; ಮೂವರು ಕ್ರೀಡಾಪಟುಗಳು ಆಸ್ಪತ್ರೆಗೆ ದಾಖಲು

ಟೋಕಿಯೋ: ಕ್ರೀಡಾಕೂಟವೊಂದರಲ್ಲಿ ಮೂವರು ಸ್ಪರ್ಧಿಗಳು ಸ್ಯಾನಿಟೈಸರ್ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜಪಾನ್‌ ನ ಯಮನಾಶಿಯಲ್ಲಿ ನಡೆದಿದೆ.

ಯಮನಾಶಿಯ ಸ್ಪೋರ್ಟ್ಸ್ ಫೆಡರೇಶನ್ ಆಯೋಜಿಸಿದ್ದ ಬಾಲಕಿಯರ 5,000 ಮೀಟರ್ ಓಟದ ಸ್ಪರ್ಧೆ ನಡೆಯುವ ಕ್ರೀಡಾಂಗಣದಲ್ಲಿ  ಆಯೋಜಕರು ಸ್ಯಾನಿಟೈಸರ್ ಬೆರೆಸಿ ಕುಡಿಯುವ ನೀರಿನ ಕೇಂದ್ರದಲ್ಲಿ ಇಟ್ಟಿದ್ದ ಮಿಶ್ರಣವನ್ನು ಸ್ಪರ್ಧಿಗಳು ಅರಿವಿಲ್ಲದೆ ಕುಡಿದಿದ್ದಾರೆ.

ಸ್ಯಾನಿಟೈಸರ್ ಕುಡಿದವರಲ್ಲಿ ಒಬ್ಬರು ಪಂದ್ಯದ ವೇಳೆ ವಾಂತಿ ಮಾಡಿಕೊಂಡು ಕುಸಿದು ಬಿದ್ದಿದ್ದು, ಇಬ್ಬರು ಪಂದ್ಯ ಮುಗಿಸಿದ್ದಾರೆ. ಅಸ್ವಸ್ಥಗೊಂಡ ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡಿಯುವ ನೀರನ್ನು ಇಡುವ  ರಟ್ಟಿನ ಪೆಟ್ಟಿಗೆಯಲ್ಲಿ ಲೇಬಲ್ ಮಾಡದ ಪ್ಲಾಸ್ಟಿಕ್ ಬಾಟಲಿಯಲ್ಲಿ ಸ್ಯಾನಿಟೈಸರ್ ಅನ್ನು ಸಂಗ್ರಹಿಸಿಡಲಾಗಿತ್ತು.  ಕೋವಿಡ್  ನಂತರ  ಈ  ರೀತಿ ಇಡುವುದು ರೂಢಿಯಾಗಿತ್ತು ಎಂದು  ಯಮನಾಶಿ ಸ್ಪೋರ್ಟ್ಸ್ ಫೆಡರೇಶನ್ ತಿಳಿಸಿದೆ.

 ಘಟನೆಯ ಬಗ್ಗೆ ಬಲವಾದ ತನಿಖೆ ನಡೆಸುವುದಾಗಿ ಜಪಾನ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಪರ್ಧಿಗಳು ಮತ್ತು ಅವರ ಕುಟುಂಬಗಳಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇನೆ. ಈ ಬಗ್ಗೆ ತನಿಖೆ ನಡೆಸಿ  ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯಮನಾಶಿ  ಗವರ್ನರ್ ಕೊಟೊರೊ ನಾಗಸಾಕಿ ಹೇಳಿದ್ದಾರೆ.

Join Whatsapp
Exit mobile version