ಚಿಕ್ಕ ಬಳ್ಳಾಪುರ: ರಾಜ್ಯದ 160 ವರ್ಷದಷ್ಟು ಹಳೆಯ ಚರ್ಚ್ ವೊಂದನ್ನು ಸಂಘಪರಿವಾರದ ಕಾರ್ಯಕರ್ತರು ಧ್ವಂಸಗೊಳಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮತಾಂತರ ನಿಷೇಧ ಕಾಯ್ದೆ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿರುವುದರ ನಡುವೆ ಚರ್ಚ್ ವೊಂದನ್ನು ಧ್ವಂಸಗೊಳಿಸಲಾಗಿದೆ.
ಇಂದು ಬೆಳಗ್ಗೆ 5.30ರ ಸುಮಾರಿಗೆ ಈ ಕೃತ್ಯವೆಸಗಲಾಗಿದ್ದು, 160 ವರ್ಷ ಹಳೆಯದಾದ ಸೆಂಟ್ ಜೋಸೆಫ್ ಚರ್ಚ್ ನ ಸೆಂಟ್ ಆಂಥೋನಿ ಪ್ರತಿಮೆಗೆ ಹಾನಿ ಮಾಡಲಾಗಿದೆ.
ಇತ್ತೀಚೆಗೆ ಕ್ರಿಶ್ಚಿಯನ್ ಸಮುದಾಯದವರಿಗೆ ಪ್ರಾರ್ಥನೆ ಮಾಡಲು ತೊಂದರೆ ಉಂಟುಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದರ ನಡುವೆ ಚರ್ಚ್ ಗೆ ಹಾನಿ ಮಾಡಿದ ಪ್ರಕರಣ ವರದಿಯಾಗಿದೆ.