ನಡೆಯಲಿಲ್ಲ ಸಂಘಪರಿವಾರದ ಬಾಯ್ಕಾಟ್ ಬೆದರಿಕೆ: ‘ಪಠಾಣ್’ ಚಿತ್ರಕ್ಕೆ ಭಾರೀ ಮೆಚ್ಚುಗೆ

Prasthutha|

ನವದೆಹಲಿ: ನಟ ಶಾರುಖ್, ನಟಿ ದೀಪಿಕಾ ಪಡುಕೋಣೆ ನಟನೆಯ ಪಠಾಣ್’ ಚಿತ್ರ ಇಂದು ತೆರೆ ಕಂಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


‘ಬೇಷರಮ್ ರಂಗ್’ ಹಾಡಿಗೆ ಸಂಘಪರಿವಾರ ವಿವಾದವೆಬ್ಬಿಸಿದ್ದು, ಬಾಯ್ಕಾಟ್ ಬೆದರಿಕೆ, ಪ್ರತಿಭಟನೆ, ಹನುಮಾನ್ ಚಾಲೀಸ್ ಪಠಣದ ನಡುವೆಯೂ ‘ಪಠಾಣ್’ ಚಿತ್ರದ ಅಬ್ಬರ ಜೋರಾಗಿದೆ. ಪ್ರೇಕ್ಷಕರು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಬಾಲಿವುಡ್ ಚಿತ್ರ ವಿಮರ್ಶಕ ತರಣ್ ಆದರ್ಶ್, ಚಿತ್ರವನ್ನು ಒಂದೇ ಸಾಲಿನಲ್ಲಿ ಬ್ಲಾಕ್ಬಸ್ಟರ್ ಎಂದು ಬಣ್ಣಿಸಿದ್ದಾರೆ.

- Advertisement -


ಸುದೀರ್ಘ ವಿರಾಮದ ಬಳಿಕ ಶಾರುಖ್ ಖಾನ್ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದು, ಭರ್ಜರಿ ಆ್ಯಕ್ಷನ್’ನೊಂದಿಗೆ ಅಭಿಮಾನಿಗಳ ಮನ ಗೆದ್ದಿದ್ದಾರೆ ಎನ್ನುತ್ತಿದ್ದಾರೆ ಬಹುತೇಕ ನೆಟ್ಟಿಗರು.
ಮೊದಲೇ ದಿನವೇ 45 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ.

- Advertisement -