ಬೆಳ್ಳಾರೆ: ಸಂಘಪರಿವಾರದ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ ಸಫ್ರೀದ್ ಎಂದು ತಿಳಿದು ಬಂದಿದೆ.
ಬೆಳ್ಳಾರೆಯ ದೇವಿ ಹೈಟ್ಸ್ ಮ್ಯಾನೇಜರ್ ಪ್ರಶಾಂತ್ ರೈ ಎಂಬವರಿಗೆ ಸಫ್ರೀದ್ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ನಿನ್ನೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯನ್ನು ಇಂದು ಸಫ್ರೀದ್ ನನ್ನು ಪೊಲೀಸರು ಬಂಧಿಸಿದ್ದಾರೆ.