ಮಂಡ್ಯ: ಶಾಲೆಯೊಂದರಲ್ಲಿ ಕ್ರಿಸ್‌ಮಸ್ ಆಚರಣೆ ಮಾಡದಂತೆ ಸಂಘಪರಿವಾರದ ಕಾರ್ಯಕರ್ತರು ತಡೆದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
ಪಾಂಡವಪುರದ ನಿರ್ಮಿಲ ಹೈಸ್ಕೂಲ್ ಗೆ ನುಗ್ಗಿದ ಸಂಘಪರಿವಾರ ಕಾರ್ಯಕರ್ತರು ಶಾಲೆಯಲ್ಲಿರುವ ಶಿಕ್ಷಕರ ಜೊತೆಗೆ ವಾಗ್ವಾದ ನಡೆಸಿ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಿರ್ಮಲಾ ಇಂಗ್ಲಿಷ್ ಹೈಸ್ಕೂಲ್ ಮತ್ತು ಕಾಲೇಜಿನ ಮುಖ್ಯೋಪಾಧ್ಯಾಯಿನಿ ಕನಿಕಾ ಫ್ರಾನ್ಸಿಸ್ ಮೇರಿ, ವಿದ್ಯಾರ್ಥಿಗಳು ಕ್ರಿಸ್‌ಮಸ್ ಆಚರಣೆಯನ್ನು ಆಯೋಜಿಸಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಬಲವಂತವಾಗಿ ಸಂಸ್ಥೆಯೊಳಗೆ ಪ್ರವೇಶಿಸಿದ್ದಾರೆ.
ನಾವು ಪ್ರತಿ ವರ್ಷ ಕ್ರಿಸ್‌ಮಸ್ ಆಚರಣೆಯನ್ನು ಆಯೋಜಿಸುತ್ತಿದ್ದೇವೆ. ಆದರೆ ಕೊರೋನಾ ಪ್ರೇರಿತ ನಿರ್ಬಂಧಗಳಿಂದ ಅದನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ನಾವು ಸಣ್ಣ ಆಚರಣೆಯನ್ನು ಆಯೋಜಿಸಿದ್ದೆವು. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಹಣ ಸಂಗ್ರಹಿಸಿ ಕೇಕ್ ಆರ್ಡರ್ ಮಾಡಿದ್ದರು. ಇದಕ್ಕೆ ಪೋಷಕರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.