Home ಕರಾವಳಿ ನವೀಕರಣಗೊಳ್ಳುತ್ತಿದ್ದ ಮಳಲಿ ಮಸೀದಿಯನ್ನು ದೇವಸ್ಥಾನವೆಂದು ಸುಳ್ಳು ಸುದ್ದಿ ಹಬ್ಬಿಸಿದ ಸಂಘಪರಿವಾರ !

ನವೀಕರಣಗೊಳ್ಳುತ್ತಿದ್ದ ಮಳಲಿ ಮಸೀದಿಯನ್ನು ದೇವಸ್ಥಾನವೆಂದು ಸುಳ್ಳು ಸುದ್ದಿ ಹಬ್ಬಿಸಿದ ಸಂಘಪರಿವಾರ !

►► ಬಜರಂಗದಳದ ವಾದಕ್ಕೆ ತುಪ್ಪ ಸುರಿದ ಕನ್ನಡ ಮಾಧ್ಯಮಗಳು

ಮಂಗಳೂರು: ನವೀಕರಣಕ್ಕೆಂದು ಸಿದ್ಧಗೊಳ್ಳುತ್ತಿದ್ದ ಮಂಗಳೂರಿನ ಹೊರವಲಯದಲ್ಲಿರುವ ಮಳಲಿಯಲ್ಲಿರುವ (ಮನಾಲ್) 850 ವರ್ಷಗಳ ಪುರಾತನ ಮಸೀದಿಯನ್ನು ಸಂಘಪರಿವಾರದ ಕಾರ್ಯಕರ್ತರು ದೇವಸ್ಥಾನ ಎಂದು ಸುಳ್ಳು ಹಕ್ಕು ಪ್ರತಿಪಾದಿಸಿ ನಿರ್ಮಾಣಕ್ಕೆ ಅಡ್ಡಿಪಡಿಸಿರುವ ಘಟನೆ ಗುರುವಾರ ನಡೆದಿದೆ.


ಮಳಲಿ ಮಸೀದಿಯನ್ನು ಇಂಡೋ-ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದ್ದು. ಸರಿ ಸುಮಾರು 850 ವರ್ಷಗಳ ಹಿಂದೆ ಕಟ್ಟಲಾಗಿರುವ ಈ ಮಸೀದಿಯಲ್ಲಿ ಸ್ಥಳಾವಕಾಶದ ಕೊರತೆಯಿಂದ ಅದನ್ನು ನವೀಕರಿಸಲು ಅಲ್ಲಿನ ಆಡಳಿತ ಮಂಡಳಿ ನಿರ್ಧರಿಸಿತ್ತು. ಅದರಂತೆ ಹಳೆ ಮಸೀದಿಯನ್ನು ಒಡೆಯುವ ಕಾರ್ಯಕ್ಕೆ ಮುಂದಾಗಿತ್ತು. ಇದೇ ವೇಳೆ ಹಠಾತ್ತನೇ ಮಸೀದಿಗೆ ಅಕ್ರಮವಾಗಿ ಪ್ರವೇಶಿಸಿರುವ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ಮತ್ತು ಗ್ಯಾಂಗ್, ಇಲ್ಲಿ ದೇವಸ್ಥಾನಗಳ ಅವಶೇಷಗಳಿದ್ದು ನಿರ್ಮಾಣಕ್ಕೆ ತಡೆ ನೀಡುವಂತೆ ತಗಾದೆ ತೆಗೆದು ಹೊಸ ವಿವಾದ ಸೃಷ್ಟಿಸಿದ್ದಾರೆ.

ಬಜರಂಗದಳದ ಮಾತಿಗೆ ತಕ್ಕ ಕುಣಿದಿರುವ ರಾಜ್ಯದ ಬಹುತೇಕ ಮಾಧ್ಯಮಗಳು ಬಗೆ ಬಗೆಯ ಸುದ್ದಿಗಳನ್ನು ಬಿತ್ತರಿಸಿ ಮತ್ತಷ್ಟು ಚರ್ಚೆಗೆ ಆಸ್ಪದವನ್ನು ನೀಡಿದೆ. ದರ್ಗಾ ಕಟ್ಟಡ ಒಡೆದಾಗ ದೇವಸ್ಥಾನ ಪತ್ತೆಯಾಗಿದೆ ಎಂದು ಶೀರ್ಷಿಕೆ ನೀಡಿ ಬಜರಂಗದಳದ ಸುಳ್ಳನ್ನೇ ಪ್ರಸಾರ ಮಾಡಿರುವ ಮಾಧ್ಯಮಗಳು ಜನರ ಮಧ್ಯೆ ಗೊಂದಲ ಸೃಷ್ಟಿಸಿದೆ. ಪುರಾತನ ಮಸೀದಿಯೊಂದನ್ನು “ಜೈನ ಬಸದಿ ಅಥವಾ ದೇವಸ್ಥಾನ” ಎಂದು ಸುದ್ದಿ ಬಿತ್ತರಿಸಿದೆ.


ಇನ್ನು ಸಂಘಪರಿವಾರ ಸೃಷ್ಟಿಸಿದ ಹುಯಿಲು ವಿವಾದವಾಗುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಯಥಾಸ್ಥಿತಿ ಕಾಪಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ನೀಡಿದೆ. ಪ್ರಾಚೀನ ಮಸೀದಿಯ ರಚನೆಯನ್ನು ಹಾಗೇ ಇಟ್ಟು, ನಂತರ ವಿಸ್ತರಿಸಿರುವ ಕಟ್ಟಡವನ್ನು ಕೆಡವಿ ನವೀಕರಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೆವು ಎಂದು ಮಳಲಿ ಗ್ರಾಮಸ್ಥರು ತಿಳಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version