Home ಟಾಪ್ ಸುದ್ದಿಗಳು ಸಂಘಪರಿವಾರಕ್ಕೆ ಸಡ್ಡು ಹೊಡೆದು ಕರಗ ಮಹೋತ್ಸವಕ್ಕೆ ಚಾಲನೆ; ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ಸಂಘಪರಿವಾರಕ್ಕೆ ಸಡ್ಡು ಹೊಡೆದು ಕರಗ ಮಹೋತ್ಸವಕ್ಕೆ ಚಾಲನೆ; ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ

ಬೆಂಗಳೂರು: ಕರಗ ಉತ್ಸವ ಮುಸ್ಲಿಮರ ಸಹಭಾಗಿತ್ವದೊಂದಿಗೆ ನಡೆಯಬಾರದು ಎಂದು ಕರೆ ನೀಡಿದ್ದ ಸಂಘ ಪರಿವಾರದ ಬೆದರಿಕೆಗೆ ಸಡ್ಡು ಹೊಡೆದಿರುವ ಬೆಂಗಳೂರು ಕರಗ ಉತ್ಸವ ಸಮಿತಿ,  ಪ್ರತಿವರ್ಷದಂತೆ ಈ ವರ್ಷವು ಕರಗ ಮೆರವಣಿಗೆ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಜಾತ್ರೆಗೆ ಚಾಲನೆ ನೀಡಿದೆ.

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿದ್ದ ಬೆಂಗಳೂರು ಕರಗ ಮಹೋತ್ಸವ , ಈ ಬಾರಿ ಏಪ್ರಿಲ್ 8 ರಿಂದ  18ರ ವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳು ನಿಗದಿಯಾಗಿವೆ.

ರಾಜ್ಯದ ಹಲವೆಡೆ ಹಿಜಾಬ್, ಹಲಾಲ್, ಆಝಾನ್ ವಿವಾದದಿಂದಾಗಿ ಅನೇಕ ಜಾತ್ರೆ, ಉತ್ಸವಗಳಲ್ಲಿನ ಭಾವೈಕ್ಯ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತಿರುವ ಈ ಸನ್ನಿವೇಶದಲ್ಲಿ ಹಿಂದಿನ ರೂಢಿಯಂತೆ ಹಿಂದೂ-ಮುಸ್ಲಿಮರು ಹಳೆ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ.

ಬೆಂಗಳೂರಿನ ವಿಶಿಷ್ಟ ಹಬ್ಬ ಕರಗ ಉತ್ಸವಕ್ಕೆ ತನ್ನದೇ ಆದ ಐತಿಹ್ಯ ಹೊಂದಿದ್ದು, ಕೋಮು ದ್ವೇಷಕ್ಕೆ ವಿರುದ್ಧವಾಗಿ ಭಾವೈಕ್ಯ ಭಾವನೆ ಎತ್ತಿ ಹಿಡಿಯುವಲ್ಲಿ ಹಲವು ವರ್ಷಗಳಿಂದ ಯಶಸ್ವಿಯಾಗಿದೆ.

Join Whatsapp
Exit mobile version