ಅನ್ಯಧರ್ಮೀಯರನ್ನು  ನೇಮಿಸಿದ ಆರೋಪ:  ಗರ್ಬಾ ಸಂಘಟಕರನ್ನು ಥಳಿಸಿದ ಸಂಘಪರಿವಾರದ ಕಾರ್ಯಕರ್ತರು

Prasthutha|

ಸೂರತ್: ಗರ್ಬಾ ಪೆಂಡಾಲ್ ನಲ್ಲಿ ಅನ್ಯಧರ್ಮೀಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಸಂಘಪರಿವಾರದ ಕಾರ್ಯಕರ್ತರು, ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಸ್ಥಳವನ್ನು ಧ್ವಂಸಗೊಳಿಸಿರುವ ಘಟನೆ ಗುಜರಾತ್ ನ ಸೂರತ್ ನಗರದಲ್ಲಿ ನಡೆದಿದೆ.

- Advertisement -

ಸಂಘಪರಿವಾರದ ಕಾರ್ಯಕರ್ತರ ಗುಂಪೊಂದು  ಸೋಮವಾರ ರಾತ್ರಿ ಸೂರತ್ ನ ವೆಸು ಪ್ರದೇಶದಲ್ಲಿ ಠಾಕೋರ್ ಜಿ ನಿ ವಾಡಿ ಗರ್ಬಾ ಪೆಂಡಾಲ್  ಗೆ ತೆರಳಿ ಸಂಘಟಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಥಳಿಸಿದಲ್ಲದೆ, ಅಲ್ಲಿನ ಸ್ಥಳದ ಒಂದು ಭಾಗವನ್ನು ಹಾನಿಗೊಳಿಸಿದ್ದಾರೆ ಎಂದು ವಲಯ ಡಿಸಿಪಿ ಸಾಗರ್ ಬಾಗ್ಮಾರ್ ಹೇಳಿದ್ದಾರೆ.

ಪೆಂಡಾಲ್ ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಬೇರೆ ಧರ್ಮಕ್ಕೆ ಸೇರಿದವರು, ಅವರನ್ನು ಹೊರಹಾಕಬೇಕು ಎಂದು ಸಂಘಪರಿವಾರದ ಕಾರ್ಯಕರ್ತರು ಆಗ್ರಹಿಸಿರುವುದಾಗಿ ಬಾಗ್ಮಾರ್ ತಿಳಿಸಿದ್ದಾರೆ.

- Advertisement -

ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ನಾವು ದೂರು ದಾಖಲಿಸಲು ಸಂಘಟಕರನ್ನು ಕರೆದಿದ್ದೇವೆ, ಆದರೆ ಅವರು ನಿರಾಕರಿಸಿದರು, ಕೊನೆಗೆ ತಮ್ಮಲ್ಲಿಯೇ ವಿಷಯವನ್ನು ಇತ್ಯರ್ಥಗೊಳಿಸಿದ್ದಾರೆ ಎಂದು ಬಾಗ್ಮಾರ್ ಹೇಳಿದ್ದಾರೆ.

Join Whatsapp