Home ಟಾಪ್ ಸುದ್ದಿಗಳು ದೆಹಲಿಯ ಬಾಬರ್ ರಸ್ತೆಯ ಬೋರ್ಡ್ ಮೇಲೆ ‘ಅಯೋಧ್ಯೆ ಮಾರ್ಗ’ ಪೋಸ್ಟರ್ ಅಂಟಿಸಿದ ಸಂಘಪರಿವಾರದ ಕಾರ್ಯಕರ್ತರು

ದೆಹಲಿಯ ಬಾಬರ್ ರಸ್ತೆಯ ಬೋರ್ಡ್ ಮೇಲೆ ‘ಅಯೋಧ್ಯೆ ಮಾರ್ಗ’ ಪೋಸ್ಟರ್ ಅಂಟಿಸಿದ ಸಂಘಪರಿವಾರದ ಕಾರ್ಯಕರ್ತರು

ನವದೆಹಲಿ: ಸಂಘಪರಿವಾರದ ಕಾರ್ಯಕರ್ತರು ದೆಹಲಿಯ ಬಾಬರ್ ರಸ್ತೆಯ ಸೈನ್ ಬೋರ್ಡ್ ಮೇಲೆ ‘ಅಯೋಧ್ಯೆ ಮಾರ್ಗ’ ಸ್ಟಿಕ್ಕರ್ ಅಂಟಿಸಿದ್ದಾರೆ. ಈ ಘಟನೆ ಇಂದು ಬೆಳಿಗ್ಗೆ (ಜ.20) ಕಂಡು ಬಂದಿದೆ.

ಈ ಬಗ್ಗೆ ಮಾತನಾಡಿದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ, ಬಹಳ ದಿನಗಳಿಂದ ಈ ರಸ್ತೆಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದೇವು. ಈ ದೇಶವು ರಾಮ, ಕೃಷ್ಣ, ವಾಲ್ಮೀಕಿ, ಗುರು ರವಿದಾಸರಂತಹ ಮಹಾಪುರುಷರ ಹೆಸರು ಇಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವು ಎಂದು ಹೇಳಿದ್ದಾರೆ.

ಈಗ ಬಾಬರಿ ಮಸೀದಿ ಇಲ್ಲದಿರುವಾಗ ದೆಹಲಿಯ ಬಾಬರ್ ರಸ್ತೆಯಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದರೆ. ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯೆ ಎಂದು ಬದಲಾಸಿರುವ ವಿಡಿಯೋವನ್ನು ಎಎನ್ ಐ ಹಂಚಿಕೊಂಡಿದೆ.

Join Whatsapp
Exit mobile version