Home ಟಾಪ್ ಸುದ್ದಿಗಳು ಹಿಜಾಬ್ ವಿಷಯ ಮುಂದಿಟ್ಟು ಕಾಲೇಜಿನೊಳಗೆ ನುಗ್ಗಿ ಗೂಂಡಾಗಿರಿ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಹಿಜಾಬ್ ವಿಷಯ ಮುಂದಿಟ್ಟು ಕಾಲೇಜಿನೊಳಗೆ ನುಗ್ಗಿ ಗೂಂಡಾಗಿರಿ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಚಿಕ್ಕಮಗಳೂರು: ಹಿಜಾಬ್ ವಿಷಯ ಮುಂದಿಟ್ಟು ಚಿಕ್ಕಮಗಳೂರಿನ ಮೊಗ್ತಿಹಳ್ಳಿ ಪದವಿ ಪೂರ್ವ ಕಾಲೇಜು ಆವರಣದೊಳಕ್ಕೆ ನುಗ್ಗಿದ ಇಬ್ಬರು ಸಂಘಪರಿವಾರದ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ವೈರಲ್ ಆಗಿದೆ.


ಮಧು ಮೂಗ್ತಿಹಳ್ಳಿ ಹಾಗೂ ಮನೋಹರ್ ಎಂಬ ಇಬ್ಬರು ಸಂಘಪರಿವಾರದ ಕಾರ್ಯಕರ್ತರು ಕಾಲೇಜು ಆವರಣದೊಳಗೆ ನುಗ್ಗಿ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ.
ವಿದ್ಯಾರ್ಥಿನಿಯರು ಹಿಜಾಬ್ ಧರಿಸಬಾರದು ಎಂದು ಹೇಳುತ್ತಾ ಮಧು ಎಂಬಾತ ಮೊದಲಿಗೆ ತರಗತಿಗೆ ಬಂದು ಆವಾಜ್ ಹಾಕಿದ್ದಾನೆ. ಆತನ ನಡೆಯನ್ನು ಕೆಲವು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಆಗ ಆತ ಮೊಬೈಲ್ ಕರೆ ಮಾಡಿ ಇತರ ಕೆಲವರನ್ನು ಕಾಲೇಜಿನ ಆವರಣದೊಳಗೆ ಕರೆಸಿ ವಿದ್ಯಾರ್ಥಿಗಳ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವೀಡಿಯೋದಲ್ಲಿದೆ.


ಮನೋಹರ್ ವಿದ್ಯಾರ್ಥಿಗೆ ಬೆದರಿಕೆ ಹಾಕಿ ಪ್ರಚೋದಿಸುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸ್ಥಳದಲ್ಲಿ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳು ಇರುವುದು ವೀಡಿಯೋದಲ್ಲಿ ಕಾಣುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಚಾಂದ್ ಪಾಷ, ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಲು ಅವಕಾಶ ಕೊಟ್ಟವರು ಯಾರು? ಇವರ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುವಿರಿ. ವಿದ್ಯಾರ್ಥಿಗಳೊಂದಿಗೆ ರೌಡಿಸಂ ತೋರಿಸಿದ ಇವರ ಮೇಲೆ ಕ್ರಮಕೈಗೊಳ್ಳದಿದ್ದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Join Whatsapp
Exit mobile version