Home ಟಾಪ್ ಸುದ್ದಿಗಳು ಮುಸ್ಲಿಂ ಮಾಂಸ ವ್ಯಾಪಾರಿಗಳನ್ನು ಥಳಿಸಿ ಮುಖಕ್ಕೆ ಮೂತ್ರ ವಿಸರ್ಜಿಸಿದ ಸಂಘಪರಿವಾರ ಕಾರ್ಯಕರ್ತರು

ಮುಸ್ಲಿಂ ಮಾಂಸ ವ್ಯಾಪಾರಿಗಳನ್ನು ಥಳಿಸಿ ಮುಖಕ್ಕೆ ಮೂತ್ರ ವಿಸರ್ಜಿಸಿದ ಸಂಘಪರಿವಾರ ಕಾರ್ಯಕರ್ತರು

ದೆಹಲಿ: ಇಬ್ಬರು ಮುಸ್ಲಿಂ ಮಾಂಸ ಮಾರಾಟಗಾರರ ಮೇಲೆ ಮೂವರು ಪೊಲೀಸ್ ಸಿಬ್ಬಂದಿ ಸೇರಿ ಸಂಘಪರಿವಾರದ ಕಾರ್ಯಕರ್ತರು, ಹಲ್ಲೆ ಮಾಡಿ ಅವರ ಮುಖದ ಮೇಲೆ ಮೂತ್ರ ವಿಸರ್ಜಿಸಿ ದುರ್ವರ್ತನೆ ತೋರಿದ ಘಟನೆ ಪೂರ್ವ ದಿಲ್ಲಿಯ ನೆರೆಯ ಶಹ್ದಾರಾದಲ್ಲಿ ನಡೆದಿದೆ.


ಆನಂದ ವಿಹಾರ್ ಪ್ರದೇಶದಲ್ಲಿ ಮಾರ್ಚ್ 7ರಂದು ಈ ಘಟನೆ ನಡೆದಿದೆ. ಆ ಇಬ್ಬರು ಮಾಂಸ ಮಾರಾಟಗಾರರು ತಮ್ಮ ಕಾರಿನಲ್ಲಿ ಬರುವಾಗ ಅದಕ್ಕೆ ಬೈಕ್ ಒಂದು ಡಿಕ್ಕಿ ಹೊಡೆದಿದೆ.
ದಾಳಿಕೋರರು ಸಂಶಯಿತ ಗೋರಕ್ಷಕರು ಎಂದು ಹೇಳಲಾಗಿದೆ. ಅವರು ಮುಸ್ಲಿಂ ಮಾಂಸದ ವ್ಯಾಪಾರಿಗಳಿಗೆ ಕೊಲ್ಲುವ ಬೆದರಿಕೆ ಹಾಕಿದ್ದಲ್ಲದೆ, ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ.


ಈ ದಾಳಿಕೋರ ಏಳು ಜನರಲ್ಲಿ ಒಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಹಿತ ಮೂವರು ಪೊಲೀಸರಿದ್ದರು. ಎಲ್ಲರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮುಸ್ತಫಾಬಾದಿನ ನವಾಬ್ ಎನ್ನುವವರು ಗಾಜಿಪುರ ಕಸಾಯಿಖಾನೆಗೆ ಮಾಂಸ ಪೂರೈಸುವ ಕೆಲಸ ಮಾಡುತ್ತಾರೆ. ದಾಯಾದಿ ಸಹೋದರ ಸುಹೈಬ್ ಜೊತೆಗೆ ಕಾರಿನಲ್ಲಿ ಹೋಗುವಾಗ ಆನಂದ್ ವಿಹಾರ್ ಬಳಿ ಬೈಕ್ ಡಿಕ್ಕಿ ಹೊಡೆಸಿದ್ದಾರೆ. ಅವರ ಕಾರಿನಲ್ಲಿ ಮಾಂಸ ಇತ್ತು ಎಂದು ಎಫ್’ಐಆರ್’ನಲ್ಲಿ ಬರೆಯಲಾಗಿದೆ.


ಅವರು ಸ್ಕೂಟರ್ ಡ್ಯಾಮೇಜು ಆಗಿದೆ, ಅದಕ್ಕೆ ರೂ. 4,000 ತುಂಬಿ ಕೊಡಬೇಕು ಇಂಬ ಬೇಡಿಕೆ ಇಟ್ಟಿದ್ದಾರೆ. ಪೊಲೀಸ್ ಅಧಿಕಾರಿ ಅವರಿಂದ ರೂ. 2,500 ಕಿತ್ತುಕೊಂಡು, ಪಿಸಿಆರ್ ವ್ಯಾನ್ ಬರುವುದನ್ನು ನೋಡುತ್ತಲೇ ಅದನ್ನು ಸ್ಕೂಟರ್ ಚಾಲಕನಿಗೆ ನೀಡಿದ್ದಾನೆ ಎಂದೂ ಎಫ್’ಐಆರ್’ನಲ್ಲಿ ಬರೆಯಲಾಗಿದೆ.
ಮಾಂಸ ಮಾರಾಟಗಾರರು ಹಣ ನೀಡಲು ನಿರಾಕರಿಸಿದಾಗ ಪೊಲೀಸರು ರೂ. 15, 000 ಕೊಡಬೇಕು, ಇಲ್ಲದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಿಸಿಆರ್ ವ್ಯಾನ್ ನಲ್ಲಿದ್ದವರು ಇತರ ನಾಲ್ವರನ್ನು ಕರೆದು ದೂರಕ್ಕೆ ಕರೆದುಕೊಂಡು ಹೋದರು. ನವಾಬ್ ಮತ್ತು ಸೊಹೈಬ್ ರನ್ನು ಬಡಿದು ನೆಲಕ್ಕೆ ಬೀಳಿಸಿ, ಚಾಕುವಿನಿಂದ ಅವರ ಕೈ ಕತ್ತರಿಸಲು ಕೂಡ ದಾಳಿಕೋರರು ಪ್ರಯತ್ನಿಸಿದ್ದಾರೆ. ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಸಿದ್ದಲ್ಲದೆ ಮುಖಕ್ಕೆ ಉಚ್ಚೆ ಹೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಅವರನ್ನು ದನಗಳಂತೆ ಕೊಂದು ಮೋರಿಗೆಸೆಯುವುದಾಗಿಯೂ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.


ಅನಂತರ ಮುಸ್ಲಿಂ ವ್ಯಾಪಾರಿಗಳಿಗೆ ಯಾವುದೇ ಮತ್ತಿನ ಮದ್ದು ಇಂಜೆಕ್ಟ್ ಮಾಡಿ, ಅವರಿಂದ ಖಾಲಿ ಕಾಗದಕ್ಕೆ ಸಹಿ ಮಾಡಿಸಿಕೊಂಡಿದ್ದಾರೆ. ರೂ. 25,500 ವಸೂಲು ಮಾಡಿದ್ದಾರೆ ಎಂಬುದು ಎಫ್’ಐಆರ್ ನಲ್ಲಿ ತಿಳಿಸಲಾಗಿದೆ.
ಸಂತ್ರಸ್ತರ ಬೆನ್ನಿಗೆ ಮತ್ತು ತೋಳು ಕೈಗಳಿಗೆ ಗಾಯವಾಗಿದ್ದುದರಿಂದ ಅವರನ್ನು ಜಿಟಿಬಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಮಾರ್ಚ್ 10ರಂದು ಸಂತ್ರಸ್ತರ ಮೇಲೆ ಬ್ಲಾಕ್ ಮೇಲ್ ಮಾಡಿದ್ದಾರೆ, ಉದ್ದೇಶ ಪೂರ್ವಕ ಹಾನಿ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ನಾವು ದೂರುದಾರರು ಹೇಳಿರುವ ಎಲ್ಲದರ ಮೇಲೂ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಆರೋಪಿಗಳಲ್ಲಿ ಇದ್ದ ಮೂವರು ಪೋಲೀಸರನ್ನು ಶಿಸ್ತು ಕ್ರಮವಾಗಿ ತನಿಖೆ ಮುಗಿಯುವವರೆಗೆ ಅಮಾನತು ಮಾಡಲಾಗಿದೆ ಎಂದೂ ಆ ಪೊಲೀಸ್ ಅಧಿಕಾರಿ ಹೇಳಿದರು.

Join Whatsapp
Exit mobile version