Home ಟಾಪ್ ಸುದ್ದಿಗಳು ವಿದ್ಯಾರ್ಥಿಗಳು ಕೇಸರಿ ಉಡುಪು ಧರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಲೆ ಮೇಲೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

ವಿದ್ಯಾರ್ಥಿಗಳು ಕೇಸರಿ ಉಡುಪು ಧರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಶಾಲೆ ಮೇಲೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು

ಹೈದರಾಬಾದ್: ಪ್ರಾಂಶುಪಾಲರು ಶಾಲೆಗೆ ಕೇಸರಿ ಉಡುಗೆ ಧರಿಸಿ ಬಂದ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆಂಬ ಕಾರಣಕ್ಕೆ ಶಾಲೆಗೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಕಣ್ಣೆಪಲ್ಲಿ ಗ್ರಾಮದ ಬ್ಲೆಸ್ಡ್ ಮದರ್ ತೆರೆಸಾ ಹೈಸ್ಕೂಲಿನಲ್ಲಿ ನಡೆದಿದೆ.

ಜೈಶ್ರೀರಾಮ್ ಕೂಗಿದ ಗುಂಪು ಶಾಲೆಯ ಮುಖ್ಯ ಗೇಟ್ ನಲ್ಲಿ ಸ್ಥಾಪಿಸಲಾಗಿದ್ದ ಸಂತ ಮದರ್ ತೆರೆಸಾ ಅವರ ಪ್ರತಿಮೆಗೆ ಕಲ್ಲು ಎಸೆದಿದ್ದಾರೆ ಮತ್ತು ಭದ್ರತಾ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಮತ್ತು ಶಾಲೆಯ ಮೊದಲ ಮತ್ತು ಎರಡನೇ ಮಹಡಿಗೆ ಪ್ರವೇಶಿಸಿ ಕಿಟಕಿ ಗಾಜುಗಳು ಮತ್ತು ಕಚೇರಿ ಕೊಠಡಿಯನ್ನು ಧ್ವಂಸಗೊಳಿಸಿದ್ದಾರೆ.


ಏಪ್ರಿಲ್ 15ರಂದು ಸಮವಸ್ತ್ರದ ಬದಲಿಗೆ ಕೇಸರಿ ಉಡುಗೆ ಧರಿಸಿ ತರಗತಿಗೆ ಹಾಜರಾಗುತ್ತಿರುವುದನ್ನು ಗಮನಿಸಿದ ಶಾಲಾ ಆಡಳಿತ ವಿದ್ಯಾರ್ಥಿಗಳಿಗೆ ಕೇಸರಿ ಬಟ್ಟೆ ಧರಿಸಲು ಅವಕಾಶ ನಿರಾಕರಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳು ಹೊರಗಿನವರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲಿ 1000 ಜನರು ಶಾಲೆಯ ಆವರಣಕ್ಕೆ ಪ್ರವೇಶಿಸಿದ್ದು, ಕಲ್ಲು ತೂರಾಟ ನಡೆಸಿ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ.

ಇನ್ನು ‘ಹನುಮಾನ್ ದೀಕ್ಷಾ ಉಡುಗೆ’ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಪ್ರಾಂಶುಪಾಲರ ವಿರುದ್ಧ ಮಂಚೇರಿಯಲ್ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಪೋಷಕರ ದೂರಿನ ಆಧಾರದ ಮೇಲೆ ದಂಡೇಪಲ್ಲಿ ಪೊಲೀಸರು, ಸೆಕ್ಷನ್ 153 (ಎ) ಮತ್ತು 295 (ಎ) (ಧಾರ್ಮಿಕ ಭಾವನೆಗಳನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version