Home ಕರಾವಳಿ ಬೆಳ್ಳಾರೆ ಪ್ರವೀಣ್ ಶವಯಾತ್ರೆ ವೇಳೆ ಶಾಸಕ ಹರೀಶ್ ಪೂಂಜ ಮುಂದೆ ಆಕ್ರೋಶ ಹೊರಹಾಕಿದ ಸಂಘಪರಿವಾರದ ಕಾರ್ಯಕರ್ತ

ಬೆಳ್ಳಾರೆ ಪ್ರವೀಣ್ ಶವಯಾತ್ರೆ ವೇಳೆ ಶಾಸಕ ಹರೀಶ್ ಪೂಂಜ ಮುಂದೆ ಆಕ್ರೋಶ ಹೊರಹಾಕಿದ ಸಂಘಪರಿವಾರದ ಕಾರ್ಯಕರ್ತ

ಬೆಳ್ಳಾರೆ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಶವಯಾತ್ರೆ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪಕ್ಕದಲ್ಲಿ ಇನ್ನೊಂದು ವಾಹನದಲ್ಲಿ ಹೋಗುತ್ತಿರುವಾಗ ಸಂಘಪರಿವಾರದ ಕಾರ್ಯಕರ್ತನೊಬ್ಬ ಇದರ ನಾಯಕತ್ವ ನೀವೇ ತೆಗೆದುಕೊಳ್ಳಬೇಕು, ಈ ಕೊಲೆ ಇಲ್ಲಿಗೆ ಮುಗಿಯ ಬೇಕು ಎಂದು ಹೇಳಿದ್ದಾನೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮಂಗಳವಾರ ರಾತ್ರಿ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕೊಲೆಗೈದು ಪರಾರಿಯಾಗಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version