Home ಟಾಪ್ ಸುದ್ದಿಗಳು ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದ ಶ್ರೀಗಂಧ ಬೆಳೆಗಾರರು; ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯ

ರಕ್ತದಲ್ಲಿ ಪತ್ರ ಬರೆದು ಪ್ರತಿಭಟಿಸಿದ ಶ್ರೀಗಂಧ ಬೆಳೆಗಾರರು; ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯ

ಚಿಕ್ಕಮಗಳೂರು: ಶ್ರೀಗಂಧದ ಬೆಳೆಗಾರರು ರಕ್ತದಲ್ಲಿ ಪತ್ರ ಬರೆದು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದಿದೆ.

62 ಕೋಟಿ ರೂ. ಪರಿಹಾರ ಕೊಡಬೇಕಾದ ಜಾಗಕ್ಕೆ ಕೇವಲ  ಎರಡೂವರೆ ಲಕ್ಷ ನೀಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಈ ಪ್ರತಿಭಟನೆ ನಡೆದಿದೆ.

ಒಂದು ತಿಂಗಳಿನಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿರುವ  ಪ್ರತಿಭಟನಾಕಾರರು ಸಿರಿಂಜ್ ನಲ್ಲಿ ರಕ್ತ ತೆಗೆದು ಸರ್ಕಾರಕ್ಕೆ ಪತ್ರ ಬರೆದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಹೆದ್ದಾರಿ ಅಗಲೀಕರಣದ ವೇಳೆ ಬೆಳೆಗಾರರು ಜಮೀನು ಕಳೆದುಕೊಳ್ಳಲಿದ್ದು, 22 ರೈತರಿಗೆ 62 ಕೋಟಿ ಪರಿಹಾರ ಬರಬೇಕಾಗಿದೆ. ಆದರೆ ಎರಡೂವರೆ ಲಕ್ಷ ರೂ ಮಾತ್ರ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Join Whatsapp
Exit mobile version