ಕಾರವಾರ: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉತ್ತರಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಡಿವೈಎಸ್‌ಪಿ ಕಚೇರಿಗೆ ಗುರುವಾರ ದೂರು ಸಲ್ಲಿಸಿದ್ದಾರೆ.
ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಿದೆ. ಸನಾತನ ಧರ್ಮಕ್ಕೆ ತನ್ನದೇ ಆದ ಮಹತ್ವವಿದೆ. ಸನಾತರ ಧರ್ಮ ಯಾವುದೋ ಒಂದು ಗ್ರಂಥಕ್ಕೆ ಅಂಟಿಕೊಂಡಿಲ್ಲ. ಸನಾತನ ಅಥವಾ ಹಿಂದೂ ಧರ್ಮ ಎಂದರೆ ಶಾಶ್ವತ ಶಾಶ್ವತ ನಂಬಿಕೆ. ಇಂತಹ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಉದಯನಿಧಿ ಸ್ಟಾಲಿನ್ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಸಚಿವ ಉದಯನಿಧಿ ನೀಡಿರುವ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ‍್ಯದ ವ್ಯಾಪ್ತಿಗೆ ಬರುವುದಿಲ್ಲ. ಸನಾತನ ಧರ್ಮ ನಿರ್ಮೂಲನೆ ಆಗಬೇಕು ಎನ್ನುವ ಹೇಳಿಕೆ ಹಿಂದೆ ಒಳ್ಳೆಯ ಮನೋಭಾವನೆ ಇಲ್ಲ. ಈ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರವಾರ ಡಿವೈಎಸ್‌ಪಿ ವ್ಯಾಲಂಟೈನ್ ಡಿಸೋಜಾ ಅವರಿಗೆ ಬಿಜೆಪಿ ವಕ್ತಾರರಾದ ನಾಗರಾಜ ನಾಯಕ ದೂರು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ಮನೋಜ್ ಭಟ್ಟ, ಸುನಿಲ್ ತಾಮಸೆ, ರವಿ ರಾವ್, ಉದಯ ಬಶೆಟ್ಟಿ, ಎಲ್.ಕೆ.ನಾಯ್ಕ್, ರೋಷನಿ ಮಾಳ್ಸೇಕರ, ಉಲ್ಲಾಸ ಕೇಣಿ, ಸಂದೇಶ್ ಶೆಟ್ಟಿ, ಮಹೇಂದ್ರ ಬಾನಾವಳಿ, ರವಿರಾಜ್ ಅಂಕೋಲೇಕರ ಉಪಸ್ಥಿತರಿದ್ದರು.