ಲಕ್ನೋ: ‘ಸನಾತನ ಧರ್ಮವೇ ಭಾರತದ ರಾಷ್ಟ್ರೀಯ ಧರ್ಮವಾಗಿದೆ, ಇದನ್ನು ಪ್ರತಿಯೊಬ್ಬ ನಾಗರಿಕನೂ ಗೌರವಿಸಬೇಕು’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ರಾಜಸ್ಥಾನದ ಭಿನ್ಮಲ್ ಎಂಬಲ್ಲಿ ಹಮ್ಮಿಕೊಂಡಿದ್ದ ನೀಲಕಂಠ ಮಹಾದೇವ ದೇವಸ್ಥಾನದಲ್ಲಿ ವಿಗ್ರಹದ ಪುನಃಸ್ಥಾಪನೆ ಮತ್ತು ಪ್ರತಿಷ್ಠಾಪನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಈ ಹಿಂದೆ ನಮ್ಮ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ 500 ವರ್ಷಗಳ ನಂತರ ಭಗವಾನ್ ರಾಮನ ಭವ್ಯ ದೇವಾಲಯದ ನಿರ್ಮಾಣ ನಡೆಯುತ್ತಿರುವ ಅಯೋಧ್ಯೆಯ ಮಾದರಿಯಲ್ಲಿ ಅವುಗಳ ಪುನಃಸ್ಥಾಪನೆಗಾಗಿ ಅಭಿಯಾನವನ್ನು ಪ್ರಾರಂಭಿಸಬೇಕು. ರಾಷ್ಟ್ರೀಯ ಭಾವನೆಯನ್ನು ಪ್ರತಿನಿಧಿಸುವ ಭಗವಾನ್ ರಾಮನ ಈ ಭವ್ಯ ರಾಷ್ಟ್ರೀಯ ದೇವಾಲಯದ ನಿರ್ಮಾಣಕ್ಕೆ ಎಲ್ಲರೂ ದೇಣಿಗೆ ನೀಡಬೇಕು ಎಂದು ಹೇಳಿದರು.