Home ಟಾಪ್ ಸುದ್ದಿಗಳು ಸಮಸ್ತ ಮುಶಾವರ ಸದಸ್ಯ, ಹಿರಿಯ ವಿದ್ವಾಂಸ ವಾವಾಡ್ ಕುಞಿ ಕೋಯ ಮುಸ್ಲಿಯಾರ್ ನಿಧನ

ಸಮಸ್ತ ಮುಶಾವರ ಸದಸ್ಯ, ಹಿರಿಯ ವಿದ್ವಾಂಸ ವಾವಾಡ್ ಕುಞಿ ಕೋಯ ಮುಸ್ಲಿಯಾರ್ ನಿಧನ

ಕೋಝಿಕ್ಕೋಡು: “ಸಮಸ್ತ ಮುಶಾವರ” ಸದಸ್ಯ, ಹಿರಿಯ ವಿದ್ವಾಂಸ ಹಾಗೂ ಖಾಝಿ ಕುಞಿ ಕೋಯ ಮುಸ್ಲಿಯಾರ್
ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕೇರಳದ ಒಳಗೂ ಹೊರಗೂ ಆಧ್ಯಾತ್ಮಿಕ ರಂಗದಲ್ಲಿ ಸೂಫೀವರ್ಯರೂ, ಆಗಿದ್ದ ಅವರು ಹಲವು ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ಶಂಸುಲ್ ಉಲೆಮಾ ಇಕೆ ಉಸ್ತಾದ್, ಕೋಟುಮಲೆ ಉಸ್ತಾದ್ ತಾಝಕೋಡು ಕುಞಲವಿ ಉಸ್ತಾದ್, ಅಂಡೋಣ ಅಬ್ದುಲ್ಲ ಮುಸ್ಲಿಯಾರ್, ನಾರಗಶ್ಶೇರಿ ಅಬೂಬಕರ್ ಮುಸ್ಲಿಯಾರ್ ಮೊದಲಾದವರು ಇವರ ಪ್ರಮುಖ ಗುರುವರ್ಯರಾಗಿದ್ದಾರೆ.
ಪಿ ಎಂ ಎಸ್ ಎ ಪೂಕೋಯ ತಂಙಳ್,ಚಾಪನಂಙಾಡಿ ಬಾಪು ಮುಸ್ಲಿಯಾರ್, ಈಕೆ ಉಮರುಲ್ ಖಾದಿರಿ,ಕಣ್ಣಿಯಾಲ ಮೌಲಾ ಮೊದಲಾದವರು ಇವರ ಪ್ರಮುಖ ಆತ್ಮೀಯ ಗುರುಗಳಾಗಿದ್ದಾರೆ. ಸಮಸ್ತದ ಮುಶಾವರ ಸಭೆಯಲ್ಲಿ ಇವರ ಮಾತಿಗೆ ಬಹಳಷ್ಟು ಮೌಲ್ಯವನ್ನು ಕಲ್ಪಿಸಲಾಗಿತ್ತು.

ಸಾವಿರಾರು ಮಂದಿ ಶಿಷ್ಯಂದಿರನ್ನು ಹೊಂದಿದ ಇವರ ನಿಧನ ಸಮಾಜಕ್ಕೆ ಬಹಳಷ್ಟು ನಷ್ಟವಾಗಿದೆ. ಪತ್ನಿ ಫಾತಿಮಾ, ಮಕ್ಕಳಾದ ಅಬ್ದುರ್ರಹಿಮಾನ್,ರಂಲ,ಸಫಿಯ,ಸಲ್ಮಾ,ಮುಹಮ್ಮದ್ ಬಾಖವಿ ಹೈತಮಿ(ಮುದರ್ರಿಸ್ ಒಡುಙಕಾಡ್)ಬಶೀರ ಅವರನ್ನು ಮತ್ತು ಅಪಾರ ಶಿಷ್ಯವೃಂದವನ್ನು ಅವರು ಅಗಲಿದ್ದಾರೆ.

ಕುಞಿ ಕೋಯ ಮುಸ್ಲಿಯಾರ್ ನಿಧನಕ್ಕೆ ಕರ್ನಾಟಕ ದಾರಿಮೀಸ್ ಒಕ್ಕೂಟ ಇದರ ಅದ್ಯಕ್ಷರಾದ ಎಸ್ ಬಿ ಮಹಮ್ಮದ್ ದಾರಿಮಿ ತೀವ್ರ ಸಂತಾಪ ಸೂಚಿಸಿದ್ದಾರೆ.

Join Whatsapp
Exit mobile version