ರಾಜ್ಯ ಶಾಸಕರ ಸಂಬಳದಲ್ಲಿ ಶೇ. 50ರಷ್ಟು ಏರಿಕೆ !

Prasthutha|

ಬೆಂಗಳೂರು: ವಿಧಾನಸಭೆ, ವಿಧಾನ ಪರಿಷತ್ ಎರಡೂ ಶಾಸಕರ ಸಂಬಳ, ಭತ್ಯೆಯನ್ನು ಮಂಗಳವಾರ ಸದನದಲ್ಲಿ ಹೆಚ್ಚಳ  ಮಾಡಲಾಗಿದೆ.

- Advertisement -

ಇಂದು ಸಚಿವರ ವೇತನ, ಭತ್ಯೆ ಹೆಚ್ಚಳದ ವಿಧೇಯಕ ಅಂಗೀಕಾರ ಮಾಡಲಾಗಿದ್ದು,  ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ.

ರಾಜ್ಯ ಮಂತ್ರಿಗಳ ಸಂಬಳ  ತಿದ್ದುಪಡಿ ವಿಧೇಯಕ

  1.  ಮುಖ್ಯಮಂತ್ರಿ, ಮಂತ್ರಿಗಳ ಸಂಬಳ ಶೇಕಡಾ 50 ರಷ್ಟು ಹೆಚ್ಚಳ.
  2. ಮುಖ್ಯಮಂತ್ರಿಗೆ ಪ್ರತಿ ತಿಂಗಳು  ಇದ್ದ 50 ಸಾವಿರ ಸಂಬಳ ಶೇಕಡಾ 75 ಸಾವಿರಕ್ಕೆ ಹೆಚ್ಚಳ.
  3. ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳಿಗೆ ಶೇಕಡಾ 40 ಸಾವಿರ ಇದ್ದ ಸಂಬಳ 60 ಸಾವಿರ ರೂಪಾಯಿಗಳಿಗೆ ಹೆಚ್ಚಳ.
  4. ಕ್ಯಾಬಿನೆಟ್ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ ಶೇಕಡಾ 3 ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ.
  5. ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ಬಾಡಿಗೆ ಶೇಕಡಾ 80 ಸಾವಿರದಿಂದ 1ಲಕ್ಷದ 20  ಸಾವಿರ ರೂಪಾಯಿಗೆ ಹೆಚ್ಚಳ.
  6. ಕ್ಯಾಬಿನೆಟ್ ದರ್ಜೆ ಮಂತ್ರಿಗಳ ಮನೆ ನಿರ್ವಹಣೆ ವೆಚ್ಚ ಶೇಕಡಾ 20 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಳ.
  7. ಕ್ಯಾಬಿನೆಟ್ ದರ್ಜೆ ಮಂತ್ರಿಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್ ​ನಿಂದ 2 ಸಾವಿರ ಪೆಟ್ರೋಲ್ ​ಗೆ ಹೆಚ್ಚಳ ಮಾಡಲಾಗಿದೆ.
Join Whatsapp
Exit mobile version