Home ಟಾಪ್ ಸುದ್ದಿಗಳು ಶಾಂತಿನಗರ ಕಲುಷಿತ ನೀರಿನ ಸಮಸ್ಯೆ ಬಗೆಹರಿಸಿದ ಸಜಿಪ ಮುನ್ನೂರು ಗ್ರಾಮಪಂಚಾಯತ್

ಶಾಂತಿನಗರ ಕಲುಷಿತ ನೀರಿನ ಸಮಸ್ಯೆ ಬಗೆಹರಿಸಿದ ಸಜಿಪ ಮುನ್ನೂರು ಗ್ರಾಮಪಂಚಾಯತ್

ಬಂಟ್ವಾಳ: ಸಜಿಪ ಮೂನ್ನೂರು ಗ್ರಾಮ ಪಂಚಾಯತ್ ನ  ನಾಲ್ಕನೇ  ವಾರ್ಡ್ ನ ಶಾಂತಿನಗರ ನಿವಾಸಿಗಳು ಕಳೆದ 30 ವರ್ಷಗಳಿಂದ ಎದುರಿಸುತ್ತಿದ್ದ ಕಲುಷಿತ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಜಿಪಮೂನ್ನೂರು ಗ್ರಾಮ ಪಂಚಾಯತ್  ಯಶಸ್ವಿಯಾಗಿದೆ.

  ಸಜಿಪಮೂನ್ನೂರು ಗ್ರಾಮ ಪಂಚಾಯಿತ್ ನ ಶಾಂತಿನಗರದ ನಾಲ್ಕನೇ ವಾರ್ಡಿನ ನಾಗರಿಕರು ಕಳೆದ 30 ವರ್ಷಗಳಿಂದ ಕಲುಷಿತ ನೀರನ್ನು ಕುಡಿಯುತ್ತಿದ್ದು, ಈ ಬಗ್ಗೆ ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಈ ಸಮಸ್ಯೆಗೆ ಕೊಟ್ಟಮಾತಿನಂತೆ ತಕ್ಷಣ ಸ್ಪಂದಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಜಿಪಮೂನ್ನೂರು ಗ್ರಾಮ ಪಂಚಾಯತ್  ಉಪಾಧ್ಯಕ್ಷೆ  ಸಬೀನ ಹಮೀದ್  ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜಮಾಲ್ ನಂದಾವರ, ಸಿದ್ದೀಕ್ ನಂದಾವರ ಹಾಗೂ ನವೀನ ಉಪಸ್ಥಿತರಿದ್ದರು.

 ಮನವಿಗೆ ಸ್ಪಂದಿಸಿ ಕುಡಿಯುವ ನೀರನ್ನು ಒದಗಿಸಿ ಕೊಟ್ಟ ಪಂಚಾಯತ್ ಉಪಾಧ್ಯಕ್ಷೆಯ ಕಾರ್ಯಕ್ಕೆ ಗ್ರಾಮಸ್ಥರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version