“ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” | ಸಹಾಯ್ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

Prasthutha|

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ ವೈ ಎಸ್ , ಎಸ್ ಎಸ್ ಎಫ್, ಕೆಸಿಎಫ್ ವತಿಯಿಂದ “ನಿರ್ಮಲ ಮನಸ್ಸು, ನೈರ್ಮಲ್ಯ ಪರಿಸರ” ಎಂಬ ಧ್ಯೇಯ ವಾಕ್ಯದಡಿ ಸಹಾಯ್ ಸ್ವಚ್ಚತಾ ಅಭಿಯಾನಕ್ಕೆ ಮಂಗಳೂರಿನ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಾಲನೆ ದೊರಕಿತು.

- Advertisement -

ಈ ವೇಳೆ ಕರ್ನಾಟಕ ಮುಸ್ಲಿಂ ಜಮಾಅತ್ ನ ಜನ್ರಲ್ ಸೆಕ್ರೆಟರಿ ಶಾಫಿ ಸ ಅದಿ ಮಾತನಾಡಿ ರಾಜ್ಯಾದ್ಯಂತ ಇಂದಿನಿಂದ ಕರ್ನಾಟಕ ಮುಸ್ಲಿಂ ಜಮಾಅತ್ ಎಲ್ಲಾ ವಿಂಗ್ ಗಳ ವತಿಯಿಂದ ಸ್ವಚ್ಚತಾ ಆಂದೋಲನ ನಡೆಯಲಿದ್ದು ಮಂಗಳೂರಿನಲ್ಲಿ ಇವತ್ತಿನ ಈ ಸ್ವಚ್ಚತಾ ಅಭಿಯಾನ ತುಂಬಾ ವಿಶೇಷವಾಗಿ ಆರಂಭಿಸಲಾಗಿದೆ. ಮುಖ್ಯವಾಗಿ ಇಂದು ವೈದ್ಯರ ದಿನಾಚರಣೆ ಹಿನ್ನೆಲೆ ನಮ್ಮ ಸಂಘಟನೆಯ ಕಾರ್ಯಕರ್ತರು ಹೊಸ ಹುಮ್ಮಸ್ಸಿನ ಮೂಲಕ ನಗರದ ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಆವರಣ ಸ್ವಚ್ಚ ಗೊಳಿಸುವ ಮೂಲಕ ವೈದ್ಯಕೀಯ ವೃತ್ತಿ ಮಾಡುವ ಕೋವಿಡ್ ವಾರಿಯರ್ಸ್ ನಮನ ಸಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ನಿಜಕ್ಕೂ ಇದು ಒಂದು ಶ್ಲಾಘನೀಯ ಕಾರ್ಯ. ಮಾತ್ರವಲ್ಲದೆ ದೇವರು ಮೆಚ್ಚುವಂತಹಾ ಕಾರ್ಯವಾಗಿದೆ ಎಂದವರು ಹೇಳಿದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಜನ್ರಲ್ ಸೆಕ್ರೆಟರಿ ಡಾ. ಶೈಖ್ ಬಾವ ಅಬುಧಾಬಿ, ಎಸ್ ಎಸ್ ಎಫ್ ರಾಜ್ಯ ಅಧ್ಯಕ್ಷರು ಅಬ್ದುಲ್ ಲತೀಫ್ ಸ ಅದಿ, ವೆನ್ ಲಾಕ್ ಜಿಲ್ಲಾ ಆಸ್ಪತ್ರೆ ಆರ್ ಎಂ ಓ ಡಾ. ಜುಲಿಯಾನ್ ಸಲ್ಡಾನ, ಡಿಎಚ್ಓ ಡಾ. ಸದಾಶಿವ್ ಶಾನುಬೋಗ್, ದ.ಕ ಜಿಲ್ಲಾ ಸಹಾಯ್ ನ ಸಲಹೆಗಾರ ಶಿಹಾಬುದ್ದಿನ್ ತಂಙಲ್ ಮದಕ, ಡಿಪಿ ಯೂಸುಫ್ ಶಕಾಫಿ, ಸಿರಾಜುದ್ದಿನ್ ಶಕಾಫಿ ಕನ್ಯಾನ, ಜಮಾಲುದ್ದೀನ್ ವಿಟ್ಲ, ಇಸ್ಮಾಯಿಲ್ ಮಾಸ್ಟರ್‌, ಮುಸ್ತಫಾ ನೈಮಿ ಹಾವೇರಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp