ಸಾಗರ: ಝಮೀರ್ ಅಹಮದ್ ವಜಾಗೊಳಿಸಲು ಬಿಜೆಪಿ ಪ್ರತಿಭಟನೆ

Prasthutha|

ಸಾಗರ: ಸಚಿವ ಝಮೀರ್ ಅಹಮದ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

- Advertisement -

ತೆಲಂಗಾಣ ರಾಜ್ಯದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುವಾಗ ವಸತಿ ಸಚಿವ ಝಮೀರ್ ಅಹಮದ್ ಅವರು ರಾಜ್ಯದ ಸಾಂವಿಧಾನಿಕ ಹುದ್ದೆಯಾಗಿರುವ ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ತೊಡಿಸುವ ರೀತಿಯಲ್ಲಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಅವರು ಸಚಿವರಾಗಿ ಮುಂದುವರೆಯುವ ಅರ್ಹತೆ ಆ ಕ್ಷಣದಲ್ಲಿಯೇ ಕಳಕೊಂಡಿದ್ದಾರೆ. ಅವರನ್ನು ಆ ಸ್ಥಾನದಿಂದ ತೆಗೆಯಬೇಕು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್. ಗಣೇಶ್ ಪ್ರಸಾದ್ ಆಗ್ರಹಿಸಿದ್ದಾರೆ.

ಸಚಿವ ಸ್ಥಾನದಲ್ಲಿರುವ ಜವಾಬ್ಧಾರಿಯುತ ವ್ಯಕ್ತಿಯಾದ ಝಮೀರ್ ಅಹಮದ್ ಅವರು ಕೋಮು ಸಂಘರ್ಷಕ್ಕೆ ದಾರಿ ಉಂಟು ಮಾಡುವ ರೀತಿಯಲ್ಲಿ ಮಾತನಾಡಿರುವುದು ವಿಷಾದನೀಯ. ಇಂತಹ ಹೇಳಿಕೆಗಳು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

ಬಿಜೆಪಿ ಮುಖಂಡ ಆರ್.ಶ್ರೀನಿವಾಸ್ ಮಾತಾಡಿ, ನಾಲಿಗೆ ಮೇಲೆ ಹಿಡಿತವಿಲ್ಲದಂತೆ ಮಾತನಾಡುವುದು ಝಮೀರ್ ಅಹಮದ್ ಅವರ ಹವ್ಯಾಸವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಲು ಇಂತಹ ವಿವಾದಾತ್ಮಕ ಮಾತುಗಳನ್ನು ಆಡಿಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯ ಪ್ರಮುಖರಾದ ಮಧುರಾ ಶಿವಾನಂದ್, ವಿ.ಮಹೇಶ್, ಸವಿತಾ ವಾಸು, ಮೈತ್ರಿ ಪಾಟೀಲ್, ಸರೋಜಮ್ಮ, ಸತೀಶ್ ಕೆ, ವಿನೋದ್ ರಾಜ್, ಪ್ರದೀಪ್, ಬಿ.ಎಚ್.ಲಿಂಗರಾಜು, ಉಷಾ, ಪರಶುರಾಮ್, ಭಾವನಾ ಸಂತೋಷ್, ಉಮೇಶ್ ಚೌಟಗಿ, ಕೃಷ್ಣ ಶೇಟ್, ಪ್ರೇಮಾ ಸಿಂಗ್ ಪ್ರತಿಭಟನೆಯಲಿ ಉಪಸ್ಥಿತರಿದ್ದರು.