Home ರಾಜ್ಯ ಇಸ್ರೇಲ್‌ಗೆ ರಫ್ತು ಮಾಡ ಬೇಕಾದದ್ದು ಕೇಸರಿ ಕಾಯ೯ಕತ೯ರನ್ನೇ ಹೊರತು ಭಾರತದ ಕಾಮಿ೯ಕರನ್ನಲ್ಲ: ಆರ್. ಮಾನಸಯ್ಯ

ಇಸ್ರೇಲ್‌ಗೆ ರಫ್ತು ಮಾಡ ಬೇಕಾದದ್ದು ಕೇಸರಿ ಕಾಯ೯ಕತ೯ರನ್ನೇ ಹೊರತು ಭಾರತದ ಕಾಮಿ೯ಕರನ್ನಲ್ಲ: ಆರ್. ಮಾನಸಯ್ಯ

ಬೆಂಗಳೂರು: ದೇಶದ ಪ್ರಕೃತಿ ಸಂಪತ್ತು ಹಾಗೂ ಶ್ರಮ ಶಕ್ತಿಗಳನ್ನುಲೂಟಿ ಮಾಡಲು ಕಾಪೋ೯ರೇಟ್ ಶಕ್ತಿಗಳಿಗೆ ಹೆದ್ದಾರಿ ನಿಮಿ೯ಸಿದ್ದ ಮೋದಿ ಸರಕಾರ ಇದೀಗ ಕಾಮಿ೯ಕರನ್ನೇ ಸರಕಾಗಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ರಫ್ತುಗೆ ಮುಂದಾಗಿದೆ. ಇದನ್ನು ಕಾಮಿ೯ಕ ವಗ೯ ಸಹಿಸ ಕೂಡದು.ಇದರ ವಿರುದ್ದ ಬಲವಾದ ಪ್ರತಿರೋಧ ರೂಪಿಸಲೇ ಬೇಕು. ಮೋದಿ ಸರಕಾರವು ಇಸ್ರೇಲಿಗೆ ಕಳುಹಿಸಲು ಆರ್ ಎಸ್ ಎಸ್, ಬಿಜೆಪಿ ಕಾಯ೯ಕತ೯ರಿದ್ದಾರೆ. ಅವರ ಕೇಸರಿ ಗೂಂಡಾಗಳಿದ್ದಾರೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(TUCI)
ಕನಾ೯ಟಕ ಇದರ ಅಧ್ಯಕ್ಷ ಆರ್. ಮಾನಸಯ್ಯ ಹೇಳಿದ್ದಾರೆ.

ಸಾಮ್ರಾಜ್ಯಶಾಹಿ ಷಡ್ಯಂತ್ರದಿಂದ ಜಿಯೋನಿಷ್ಟ್ ಇಸ್ರೇಲ್ ಪ್ಯಾಲೆಸ್ಟೈನ್ ಜನತೆಯ ನರಮೇಧ ಮುಂದುವರೆಸಿದೆ. ಭಾರತದ ಕಾಮಿ೯ಕ ವಗ೯ ಸೇರಿದಂತೆ ಅಂತಾರಾಷ್ಟ್ರೀಯ ದುಡಿಯುವ ವಗ೯ ಹಾಗೂ ಶಾಂತಿ ಪ್ರೀಯ ಸಮೂಹವು, ಜೀವನ್ಮರಣ ಹೋರಾಟ ಮುಂದುವರೆಸಿರುವ ಪ್ಯಾಲೆಸ್ತೀನ್ ಜನತೆಯ ಪರ ಬೆಂಬಲ ಪ್ರಕಟಿಸಿದೆ. ಇಂಥಹ ಸನ್ನಿವೇಶದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಪಲ್ಟಿ ಮಾಡಿ ಇಸ್ರೇಲ್ ಗೆ ಬೆಂಬಲ ಪ್ರಕಟಿಸಿದ್ದಲ್ಲದೆ, ಜಿಯೋನಿಸ್ಟ್ ಕೋರಿಕೆಯಂತೆ ಭಾರತದ ಕಾಮಿ೯ಕರನ್ನು ಇಸ್ರೆಲ್ ಗೆ ರಪ್ತು ಮಾಡಲು ಮುಂದಾದ ಫ್ಯಾಸಿಸ್ಟ್ ಮೋದಿ ಸರಕಾರದ ನಿಧಾ೯ರವನ್ನು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ( TUCI)ಉಗ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೋದಿ ಸರಕಾರದ ದೇಶ ವಿರೋಧಿ ಹಾಗೂ ಕಾಮಿ೯ಕ ವಿರೋಧಿ ನಡೆಯನ್ನು ತಡೆಯಲು ಹೋರಾಡುವುದು ಭಾರತದ ಕಾಮಿ೯ಕರ ಹಾಗೂ ಸಮಸ್ತ ಜನರ ತುತಿ೯ನ ಕತ೯ವ್ಯವಾಗಿದೆ. ವ್ಯಾಪಕವಾದ ಪ್ರತಿಭಟನೆ ಹಾಗೂ ವಿರೋಧದ ಮೂಲಕ ಫ್ಯಾಸಿಸ್ಟ್ ಈ ನಡೆಯನ್ನು ಸೋಲಿಸುವಂತೆ ಟಿಯುಸಿಐ ಕರೆ ನೀಡಿದೆ ಎಂದು ಮಾನಸಯ್ಯ ಹೇಳಿದ್ದಾರೆ.

ಭಾರತದ ಕಾಮಿ೯ಕ ವಗ೯ವು ತನ್ನ ತ್ಯಾಗ ಮತ್ತು ಬಲಿದಾನದ ಮೂಲಕ ಪಡೆದ 44 ಕಾಮಿ೯ಕ ಕಾಯ್ದೆಗಳನ್ನು ತೆಗೆದ್ಹಾಕಿದ್ದು ಮೋದಿ ಸರಕಾರವಾಗಿದೆ. ಹಾಗೆಯೇ ಭಾರತದ ಕಾಮಿ೯ಕರ ಅದರಲ್ಲೂ ಅಸಂಘಟಿತ ವಲಯದ 50 ಕೋಟಿಯಷ್ಟಿರುವ, ದಲಿತ, ಆದಿವಾಸಿ, ಮಹಿಳಾ ಹಾಗೂ ವಲಸೆ ಕಾಮಿ೯ಕರನ್ನು ಕನಿಷ್ಠ ಕೂಲಿಯಿಂದ ವಂಚಿಸಲು 4 ಕಾಮಿ೯ಕ ಸಂಹಿತೆಗಳನ್ನು ಜಾರಿಗೆ ತಂದದ್ದು ಈ ಮೋದಿ ಸರಕಾರವಾಗಿದೆ. ಇದೀಗ ಕಾಮಿ೯ಕರನ್ನೆ ಸರುಕಾಗಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ರಫ್ತುಗೆ ಮುಂದಾಗಿದೆ. ಹಾಗೆ ರಫ್ತು ಮಾಡೋದಾದರೆ ಸಂಘಪರಿವಾರದವರಿದ್ದಾರೆ. ನಕಲಿ ಹಿಂದೂ ರಾಷ್ಟ್ರವಾದಿ ಸಂತರು, ಯೋಗಿಗಳು ಹಾಗೂ ಮನುವಾದಿ ಬ್ರಾಹ್ಮಣ ಪುರೋಹಿತರಿದ್ದಾರೆ. ಮಿಗಿಲಾಗಿ ಗೋದಿ ಮಿಡಿಯಾದವರಿದ್ದಾರೆ. ಅವರನ್ನು ರಫ್ತು ಮಾಡಲಿ ಎಂದ ಮಾನಸಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಫ್ತು ಮಾಡಲು ಭಾರತದ ಕಾಮಿ೯ಕರೇನು ಸರುಕಲ್ಲ, ಮನುಷ್ಯರೆಂದು ಈ ಫ್ಯಾಸಿಸ್ಟ್ ಶಕ್ತಿಗಳ ಮುಂದೆ ಗಟ್ಟಿಯಾಗಿ ನಿರೂಪಿಸ ಬೇಕಾಗಿದೆ ಎಂದು TUCI ಅಧ್ಯಕ್ಷ ಆರ್.ಮಾನಸಯ್ಯ ಹೇಳಿದ್ದಾರೆ.

Join Whatsapp
Exit mobile version