Home ಟಾಪ್ ಸುದ್ದಿಗಳು ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಸಹ ಎತ್ತದ ಸದಾನಂದ ಗೌಡ

ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಸಹ ಎತ್ತದ ಸದಾನಂದ ಗೌಡ

ಬೆಂಗಳೂರು: ಬೆಂಗಳೂರು ಉತ್ತರ ಸಂಸದ ಡಿ.ವಿ ಸದಾನಂದ ಗೌಡ ತಮ್ಮ ಐದು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಸಹ ಎತ್ತಿಲ್ಲ ಎಂದು ನಾಗರಿಕರ ಗುಂಪು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (Bangalore Political Action Committee) ಬಿಡುಗಡೆ ಮಾಡಿದ ಅಧ್ಯಯನದಿಂದ ತಿಳಿದುಬಂದಿದೆ.

ಡಿ.ವಿ ಸದಾನಂದ ಗೌಡ 15 ಅಧಿವೇಶನಗಳಲ್ಲಿ 63 ಪ್ರತಿಶತ ಹಾಜರಾತಿ ದಾಖಲಿಸಿದ್ದಾರೆ. ಡಿ.ವಿ ಸದಾನಂದ ಗೌಡ ಅವರು ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದೇ ಇರಲು ಕಾರಣವನ್ನು ಕೂಡ ಅಧ್ಯಯನ ಬಹಿರಂಗ ಪಡಿಸಿದೆ. ಡಿ.ವಿ ಸದಾನಂದ ಗೌಡರು 2019ರ ಮೇ 30ರಿಂದ ಜುಲೈ 07, 2021 ರವರೆಗೆ ಕೇಂದ್ರ ಸಂಪುಟ ಸಚಿವರಾಗಿದ್ದರು. ಹೀಗಾಗಿ ಅವರು ಹಾಜರಾತಿ ನೋಂದಣಿಗೆ ಸಹಿ ಮಾಡಲಿಲ್ಲ ಹಾಗೂ ಪ್ರಶ್ನೆಗಳನ್ನು ಕೇಳಲಿಲ್ಲ ಎಂದು ಅಧ್ಯಯನವು ವಿವರಿಸಿದೆ.

ಬಿಪಿಎಸಿ ತಂಡವು 2019 ರಿಂದ 2024 ರವರೆಗಿನ ಅವಧಿಯಲ್ಲಿ ವಿಶ್ಲೇಷಣೆ ನಡೆಸಿದೆ. ಈ ವರದಿ ಪ್ರಕಾರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ತೇಜಸ್ವಿ ಸೂರ್ಯ ಐದು ವರ್ಷದ ಅವಧಿಯಲ್ಲಿ 382 ಪ್ರಶ್ನೆಗಳನ್ನು ಕೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ ಮೋಹನ್ 189 ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಇಬ್ಬರು ಕ್ರಮವಾಗಿ 212 ದಿನಗಳು ಹಾಗೂ 224 ದಿನಗಳು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಒಟ್ಟು ಎಲ್ಲಾ ಸಂಸದರ ಸರಾಸರಿ ಹಾಜರಾತಿ ಶೇಕಡಾ 79 ರಷ್ಟಿದ್ದು, ಕರ್ನಾಟಕದ ಸಂಸದರ ಸರಾಸರಿ ಹಾಜರಾತಿ ಶೇಕಡಾ 71 ರಷ್ಟಿದೆ ಎಂದು ನಾಗರಿಕರ ಗುಂಪು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಅಧ್ಯಯನದಲ್ಲಿ ತಿಳಿಸಿದೆ.

Join Whatsapp
Exit mobile version