ಅಮಾನತುಗೊಂಡಿದ್ದ ಸಚಿನ್ ವಾಜೆ ಪೊಲೀಸ್‌ ಸೇವೆಯಿಂದ ವಜಾ

Prasthutha|

ಮುಂಬೈ: ಮುಖೇಶ್ ಅಂಬಾನಿ ಅವರ ನಿವಾಸದ ಬಳಿ ಜಿಲೆಟಿನ್ ತುಂಬಿದ ಕಾರು ಪತ್ತೆಯಾದ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ಸಚಿನ್ ವಾಜೆ ಅವರನ್ನು ಈ ಹಿಂದೆ ಅಮಾನತುಗೊಳಿಸಿ, ವಿಚಾರಣೆಗೆ ಒಳಪಡಿಸಿತ್ತು. ಇದೀಗ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.

- Advertisement -

ಥಾಣೆ ಉದ್ಯಮಿ ಮನ್ಸುಖ್ ಹಿರೇನ್ ಅವರ ಸಾವಿನ ಸಂಬಂಧವೂ ವಾಜ್ ಅವರ ವಿರುದ್ಧ ತನಿಖೆ ನಡೆಯುತ್ತಿದೆ, ಮುಂಬೈನ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಬಳಿ ಜಿಲೆಟಿನ್ ಕಡ್ಡಿಗಳೊಂದಿಗೆ ಅವರ ಕಾರು ಪತ್ತೆಯಾಗಿತ್ತು.

ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಬಂಧಿಸಿರುವ ವಾಜ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಾರ್ಚ್ʼನಲ್ಲಿ ಅವರನ್ನ ಎನ್ ಐಎ ಬಂಧಿಸಿ ನಂತರ ಅಮಾನತುಗೊಳಿಸಿತ್ತು.

- Advertisement -

ಅಂಬಾನಿ ಮನೆ ಮುಂದೆ ಜಿಲೆಟಿನ್ ಪತ್ತೆಯಾದ ಪ್ರಕರಣವು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿತ್ತು. ಮುಂಬೈ ಪೊಲೀಸ್ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಲಾದ ಪರಮ್ ಬೀರ್ ಸಿಂಗ್, ರಾಜ್ಯ ಎನ್ ಸಿಪಿ ನಾಯಕ ಅನಿಲ್ ದೇಶ್ ಮುಖ್ ಅವರು ನಗರದ ಪಬ್ʼಗಳು ಮತ್ತು ಹೋಟೆಲ್ʼಗಳಿಂದ ₹100 ಕೋಟಿ ಸಂಗ್ರಹಿಸುವಂತೆ ವಾಜ್ ಅವರನ್ನ ಕೇಳಿದ್ದಾರೆ ಎಂದು ಆರೋಪವೂ ಕೇಳಿ ಬಂದಿತ್ತು. ಆರೋಪಗಳ ಹಿನ್ನೆಲೆಯಲ್ಲಿ ದೇಶ್ ಮುಖ್ ಕಳೆದ ತಿಂಗಳು ಮಹಾರಾಷ್ಟ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.

Join Whatsapp