ತಾಲಿಬಾನ್ ಪ್ರತಿನಿಧಿಗೆ ಅವಕಾಶ ನೀಡುವಂತೆ ಪಾಕಿಸ್ತಾನ ಒತ್ತಾಯ: ಸಾರ್ಕ್ ಶೃಂಗಸಭೆಯನ್ನು ರದ್ದುಗೊಳಿಸಿದ ಭಾರತ

Prasthutha|

ವಾಷಿಂಗ್ಟನ್: ತಾಲಿಬಾನ್ ಸರ್ಕಾರದ ಪ್ರತಿನಿಧಿಯೊಬ್ಬರು ಅಫ್ಘಾನಿಸ್ತಾನವನ್ನು ಪ್ರತನಿಧಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ ಪಾಕಿಸ್ತಾನದ ನಡೆಯನ್ನು ಖಂಡಿಸಿ ಭಾರತ ಮತ್ತು ಇತರ ಎಂಟು ರಾಷ್ಟ್ರಗಳ ಗುಂಪು ಸಾರ್ಕ್ ಶೃಂಗಸಭೆಯನ್ನು ರದ್ದುಗೊಳಿಸಿವೆ.

- Advertisement -

ತಾಲಿಬಾನ್ ಅಧಿಕಾರಿಯೊಬ್ಬರು ಅಫ್ಘಾನಿಸ್ತಾನವನ್ನು ಪ್ರತಿನಿಧಿಸಲು ಪಾಕಿಸ್ತಾನ ಒತ್ತಾಯಪಡಿಸುತ್ತಿರುವುದರಿಂದ ಈ ಸಭೆಯನ್ನು ರದ್ದುಗೊಳಿಸಬೇಕಾಯಿತು ಎಂದು ನವದೆಹಲಿಯ ಮೂಲಗಳು ತಿಳಿಸಿವೆ.

ಪ್ರಸಕ್ತ ನ್ಯೂಯಾರ್ಕ್ ನಲ್ಲಿ ಸೆಪ್ಟೆಂಬರ್ 25 ರಂದು ನಡೆಯ ಬೇಕಾಗಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಾರ್ಕ್ ವಿದೇಶಾಂಗ ಮಂತ್ರಿಗಳ ವಾರ್ಷಿಕ ಸಮಾವೇಶವನ್ನು ರದ್ದುಗೊಳಿಸಲಾಗಿದೆ.



Join Whatsapp