ಹಿಜಾಬ್ ಧರಿಸಿ ಶಾಲೆಗೆ ಬಂದ ಬಾಲಕಿಯನ್ನು ಬೆನ್ನಟ್ಟಿದ ಪತ್ರಕರ್ತ ! ಟ್ವಿಟರ್’ನಲ್ಲಿ ಟ್ರೆಂಡ್ ಆಯ್ತು #RwandaKannadaMedia ಹ್ಯಾಷ್ ಟ್ಯಾಗ್ !

Prasthutha|

ಬೆಂಗಳೂರು: ಶಿರವಸ್ತ್ರ ಧರಿಸಿ ಶಾಲೆಗೆ ಬಂದಿದ್ದ ಎಳೆಯ ವಯಸ್ಸಿನ ವಿದ್ಯಾರ್ಥಿನಿಯನ್ನು ಶಾಲಾ ಆವರಣದಲ್ಲಿ ಅಟ್ಟಾಡಿಸಿಕೊಂಡು ಹೋಗಿ ವೀಡಿಯೋ ಮಾಡಿದ ಖಾಸಗಿ ವಾಹಿನಿಯ ಪತ್ರಕರ್ತನ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಕನ್ನಡ ಮಾಧ್ಯಮಗಳ ಅತಿರೇಖದ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಪತ್ರಕರ್ತನ ನೀಚಕೃತ್ಯದ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದು , ಟ್ವಿಟರ್’ನಲ್ಲಿ #RwandaKannadaMedia ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ.

- Advertisement -

ಈ ನಡುವೆ ವಿಜಯವಾಣಿಯ ಯೂಟ್ಯೂಬ್ ಚಾನಲ್’ನಿಂದ ಈ ವೀಡಿಯೋವನ್ನು ಡಿಲೀಟ್ ಮಾಡಲಾಗಿದೆ.


- Advertisement -

ಪತ್ರಿಕೋದ್ಯಮದ ನೀತಿಶಾಸ್ತ್ರ ಅರಿಯದ ಇಂತಹ ಪತ್ರಕರ್ತರಿಂದಲೇ ಇಂದು ಮಾಧ್ಯಮ ಕ್ಷೇತ್ರ ಹದಗೆಟ್ಟು ಹೋಗಿರುವುದು. ಬಾಲಕಿಯನ್ನು ಭೀತಿಗೆ ತಳ್ಳಿದ ಪತ್ರಕರ್ತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಹಲವು ಗಣ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version